ಬಜಪೆ: ಬಡಗ ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ ಮಿಶನ್ ಯೋಜನೆಯಡಿ 2.40 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಬೆಳ್ಳೆಚಾರ್ ಲತ್ರೋಟ್ಟು ಪರಿಶಿಷ್ಟರ ಜಾತಿ ಕಾಲೋನಿಯಲ್ಲಿ ಚಾಲನೆ, ಬೆಳ್ಳೆಚಾರ್ ತಾರನಾಥ ಸಫಳಿಗರ ಮನೆಯಲ್ಲಿ ರೈತಬಂಧು ಎರೆಹುಳ ಗೊಬ್ಬರ ತೊಟ್ಟಿ ಅಭಿಯಾನಕ್ಕೆ ಚಾಲನೆ, ಬಡಗ ಎಡಪದವು ಗ್ರಾಮ ಪಂಚಾಯತ್ ನಂದಿನಿ ಸಭಾಂಗಣದಲ್ಲಿ ಹೊಸ ಗ್ರಂಥಾಲಯದ ಲೋಕಾರ್ಪಣೆ, ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ, ಕಟ್ಟಡ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮುಂತಾದ ವಿವಿಧ ಕಾರ್ಯಕ್ರಮಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.
ನಂತರ ಶಾಸಕರು ನಾಗರಿಕರ ಕುಂದುಕೊರತೆಗಳನ್ನು ಸ್ಥಳದಲ್ಲಿ ಆಲಿಸಿ, ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಹರೀಶ್ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಪಂಚಾಯತ್ ಉಪಾಧ್ಯಕ್ಷೆ ಯಶೋದಾ ಇದ್ದರು.
Kshetra Samachara
26/08/2021 10:24 am