ವರದಿ: ದಾಮೋದರ ಮೊಗವೀರ ನಾಯಕವಾಡಿ.
ಬೈಂದೂರು: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬೈಂದೂರು ತಾಲ್ಲೂಕು ವತಿಯಿಂದ ಬೈಂದೂರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಲವ್ ಜಿಹಾದ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ .ಮಾನ್ಯ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವಂತೆ ಲಿಖಿತ ಆಗ್ರಹ ಪತ್ರ ನೀಡಲಾಯಿತು .
ಈ ಸಂದರ್ಭದಲ್ಲಿ ವಾಸುದೇವ ಗಂಗೊಳ್ಳಿ ಮಾತನಾಡಿ ಲವ್ ಜಿಹಾದ್ ಬಲಿಯಾದ ಹಲವಾರು ಹೆಣ್ಣು ಮಕ್ಕಳ ವಿಷಯವನ್ನು ತಮ್ಮ ಮಾತಿನ ಮೂಲಕ ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರು ಸರಕಾರ ಆದೇಶ ಪಾಲನೆ ಮಾಡಿ, ಕೊರೊನಾ ನಿಯಮ ಪಾಲಿಸಿ, ಮಾಸ್ಕ್ ಸಾಮಾಜಿಕ ಅಂತರ ಪಾಲನೆ ಮಾಡಿ ಶಾಂತಿಯುತ ಪ್ರತಿಭಟನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ .
ಈ ಪ್ರತಿಭಟನೆಯ ಸಂದರ್ಭದಲ್ಲಿ ಜಿಲ್ಲಾ ಮಾತೃ ಸುರಕ್ಷಾ ಸಂಯೋಜಕ ವಾಸುದೇವ. ತಾಲ್ಲೂಕು ಮಾತೃ ಸುರಕ್ಷಾ ರತ್ನಾಕರ್ ಗಂಗೊಳ್ಳಿ ತಾಲ್ಲೂಕು ಮಾತೃ ಸುರಕ್ಷಾ ಸಂಯೋಜಕ ರಾಜೇಶ್ ಆಚಾರ್ ಹಿಂ ಜಾ ವೇ ಬೈಂದೂರು ತಾಲ್ಲೂಕು ಅಧ್ಯಕ್ಷರು ಪ್ರಶಾಂತ್ ಮೊಯ್ಲಿ .ನವೀನ್ ಗಂಗೊಳ್ಳಿ ಉಮೇಶ್ ಬಿಜೂರು ವಿಜೇತ ಶೇಖರ ಕಂಬದಕೋಣೆ ಹಾಗೂ ತಾಲ್ಲೂಕು ಎಲ್ಲಾ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು .
Kshetra Samachara
17/08/2021 06:12 pm