ಸುರತ್ಕಲ್: ಸುರತ್ಕಲ್ ಬಸ್ಸು ನಿಲ್ದಾಣದ ಬಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಮಾರುಕಟ್ಟೆಗೆ ಎಂದು ಮೀಸಲಿಟ್ಟ ಜಾಗದಲ್ಲಿ ಕಟ್ಟಡ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಮಳೆ ನೀರು ನಿಂತು ರೋಗದ ಭೀತಿ ಎದುರಾಗಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಡವರು ತಮ್ಮ ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಸ್ವಚ್ಛತೆ ಪಾಲಿಸದಿದ್ದರೆ ದಂಡ ಹಾಕುವ ಆರೋಗ್ಯ ಅಧಿಕಾರಿಗಳು ಕಟ್ಟಡದಲ್ಲಿ ಮಳೆ ನೀರು ನಿಂತು ರೋಗಗಳ ಭೀತಿ ಎದುರಾಗಿದ್ದರೂ ಮೌನವಹಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಡಾಕ್ಟರ್ ಆಗಿದ್ದುಕೊಂಡು ಕಟ್ಟಡದ ಕಾಮಗಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದೆ ಕೊಳಚೆ ನೀರು ನಿಂತು ಡೆಂಗ್ಯೂ-ಮಲೇರಿಯಾ ರೋಗಗಳ ತಾಣವಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.
ಅಲ್ಲದೆ ಕಟ್ಟಡದ ಒಳಗಡೆ ವಿದ್ಯುತ್ ಕನೆಕ್ಷನ್ ತೆರೆದ ಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದೆ.ಡೆಂಗ್ಯು, ಮಲೇರಿಯಾ ಸೊಳ್ಳೆಗಳನ್ನು ಹುಟ್ಟಿಸುವ ಮಾರ್ಕೆಟ್ ,ಜನರ ಕಥೆ ಗೋವಿಂದ. ಅರೋಗ್ಯ ಅಧಿಕಾರಿಗಳೆ ಎಲ್ಲಿದ್ದೀರ, ಸರಕಾರದ ಜಾಗದಲ್ಲಿ ಮಲೇರಿಯಾ ಬರಲ್ವ?
ಕೂಡಲೇ ಶಾಸಕರು ಎಚ್ಚೆತ್ತು ಈ ಕಟ್ಟಡ ಕಾಮಗಾರಿಗೆ ಸೂಕ್ತ ವ್ಯವಸ್ಥೆಯಾಗಬೇಕು ಎಂದು ಜಾಲತಾಣದಲ್ಲಿ
ವೈರಲ್ ಆಗಿದೆ
Kshetra Samachara
16/08/2021 10:16 pm