ಉಡುಪಿ: ಈ ಹಿಂದೆ ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದ ಕಾರ್ಯಕರ್ತರ ಮೇಲೆ ಕೇಸು ದಾಖಲಿಸಲಾಗಿತ್ತು. ರಾಷ್ಟ್ರೀಯ ಪರ ವಿಚಾರಗಳಿಗೆ ಹೋರಾಟ ನಡೆಸಿದವರ ಮೇಲೆ ಕಾಂಗ್ರೆಸ್ ಸರಕಾರ ಕೇಸು ದಾಖಲಿಸಿತ್ತು.ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಸು ವಾಪಸ್ ಪಡೆಯಲು ಮಾಡಿದ ಮನವಿಗೆ ನಮ್ಮ ಬೆಂಬಲವಿದೆ. ಉಡುಪಿ, ಮಂಗಳೂರಿನಲ್ಲಿ 500ಕ್ಕೂ ಅಧಿಕ ಯುವಕರ ಮೇಲೆ ಕೇಸು ದಾಖಲಿಸಿದ್ದಲ್ಲದೆ ಪ್ರತಿಭಟನೆ ನಡೆಸಿದವರ ಮೇಲೂ ಕೇಸು ದಾಖಲಿಸಲಾಗಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ ಆರ್ ಹೇಳಿದ್ದಾರೆ.
ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆಯಲು ಕೋಟ ಶ್ರೀನಿವಾಸ ಪೂಜಾರಿ ಅವರು ಮಾಡಿದ ಮನವಿ ಅಭಿನಂದನಾರ್ಹವಾಗಿದೆ ಎಂದು ಸುನಿಲ್ ಕೆ.ಆರ್ ಹೇಳಿದರು.
ಸಿದ್ದರಾಮಯ್ಯ ಸರಕಾರವಿದ್ದಾಗ ಮುಸ್ಲಿಂ ಸಂಘಟನೆಗಳ ಮೇಲಿನ ಕ್ರಿಮಿನಲ್ ಕೇಸುಗಳನ್ನು ವಾಪಸ್ ಪಡೆಯಲಾಗಿತ್ತು. ಈಗ ಬಂದಿರುವ ಬಿಜೆಪಿ ಸರಕಾರ ಹಿಂದೂಪರ ಕಾರ್ಯಕರ್ತರ ಮೇಲಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಸುನೀಲ್ ಕೆ. ಆರ್ ಆಗ್ರಹಿಸಿದರು.
Kshetra Samachara
11/08/2021 02:39 pm