ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ,ಅಯ್ಯಪ್ಪ ಮಂದಿರದ ಮೇಲ್ಚಾವಣಿ ಲೋಕಾರ್ಪಣೆ

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ ಅವರು 35 ಲಕ್ಷದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಾದ ಅಕಾಶಭವನ ಲಾಸ್ಟ್ ಸ್ಟಾಪ್ ಬಳಿ ಅಡ್ಡ ರಸ್ತೆ 15 ಲಕ್ಷ ,ಕಾಪಿಗುಡ್ಡೆ ಲಕ್ಷ್ಮಣ ನಾಯರ್ ಮನೆಯ ಬಳಿ ಕಾಂಕ್ರಿಟ್ ರಸ್ತೆ 10 ಲಕ್ಷ,ಮಂಜಲ ಕಟ್ಟೆ ಕಾಂಕ್ರಿಟ್ ರಸ್ತೆ ವಿಸ್ತರಣೆ 5 ಲಕ್ಷ ,ಶಿವನಗರ 4 ನೆಯ ಅಡ್ಡ ರಸ್ತೆಗೆ ಕಾಂಕ್ರಿಟ್ 5 ಲಕ್ಷದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಕಾಪಿಗುಡ್ಡೆ ಶ್ರೀ ಅಯ್ಯಪ್ಪ ಮಂದಿರದ ಮೇಲ್ಚಾವಣಿ ಉದ್ಘಾಟನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಗಾಯತ್ರಿ ರಾವ್, ನಿಕಟಪೂರ್ವ ಮೇಯರ್ ದಿವಾಕರ್ ಪಾಂಡೇಶ್ವರ ಬಿಜೆಪಿ ಮಂಡಲ ಎಸ್.ಸಿ ಮೋರ್ಚಾ ಅಧ್ಯಕ್ಷ ಆನಂದ ಪಾಂಗಳ, ಕಾಪಿಗುಡ್ಡೆ ಮಂದಿರದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

09/08/2021 06:13 pm

Cinque Terre

4.61 K

Cinque Terre

0

ಸಂಬಂಧಿತ ಸುದ್ದಿ