ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಭರಾಟೆ, ಮುಂದಿನ ಚುನಾವಣೆಗಳಿಗೆ ಪೂರ್ವಸಿದ್ಧತೆ

ಮುಲ್ಕಿ: ಮುಲ್ಕಿ ನಗರ ವ್ಯಾಪ್ತಿಯಲ್ಲಿ ಶುಭಾಶಯ ಕೋರುವ ಫ್ಲೆಕ್ಸ್ ಭರಾಟೆ ಜೋರಾಗಿದ್ದು ಪ್ರಮುಖ ಎರಡು ಪಕ್ಷಗಳ ಮುಂದಿನ ಚುನಾವಣೆಗಳ ರಾಜಕೀಯ ಲೆಕ್ಕಾಚಾರಗಳು ಭರದಿಂದ ನಡೆಯುತ್ತಿದೆ.

ಕಳೆದ ಕೆಲ ತಿಂಗಳ ಹಿಂದೆ ಮುಲ್ಕಿ ನಗರ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಸೋಲಲು ಕಾರಣ ಎಂದು ಪಕ್ಷದಿಂದ ಅಮಾನತು ಮಾಡಿದ್ದ ಬಿಜೆಪಿ ಪಕ್ಷದ ಪ್ರಬಲ ನಾಯಕ ರಂಗನಾಥ ಶೆಟ್ಟಿ ಮತ್ತೆ ಬಿಜೆಪಿ ವರಿಷ್ಠರ ಕೃಪಾಕಟಾಕ್ಷದಿಂದ ದ.ಕ. ಜಿಲ್ಲೆಯ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕರಾಗಿ ನೇಮಕಗೊಂಡಿದ್ದು ತಮ್ಮನ್ನು ಪಕ್ಷದಿಂದ ಅಮಾನತು ಮಾಡಿದ ಮುಲ್ಕಿ ಬಿಜೆಪಿ ನಾಯಕರಿಗೆ ಸೆಡ್ಡುಹೊಡೆದು ಅಧಿಕಾರ ಗಿಟ್ಟಿ ಸಿಕೊಂಡಿದ್ದು ವಿರೋಧಿಗಳಿಗೆ ತಕ್ಕ ಪಾಠ ಕಲಿಸಲು ಮುಲ್ಕಿ ನಗರ ಹಳೆಯಂಗಡಿ ಪಡುಪಣಂಬೂರು ಹೆದ್ದಾರಿ ಬದಿಯಲ್ಲಿ ಫ್ಲೆಕ್ಸ್ ಅಳವಡಿಸಿದ್ದಾರೆ.

ಈ ನಡುವೆ ಕಾಂಗ್ರೆಸ್ ತಾನೇನೂ ಕಡಿಮೆ ಇಲ್ಲ ಎಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೋಹನ್ ಕೋಟ್ಯಾನ್ ರವರ ಫ್ಲೆಕ್ಸ್ ಅಲ್ಲಲ್ಲಿ ರಾರಾಜಿಸುತ್ತಿದೆ.

ವಿಶೇಷವೆಂದರೆ ಬಿಜೆಪಿಯ ರಂಗನಾಥ ಶೆಟ್ಟಿ ಶುಭ ಕೋರುವ ಫ್ಲೆಕ್ಸ್ ನಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರ ಹೆಸರಿರುವುದು ಕಾಂಗ್ರೆಸ್ ನಾಯಕರಿಗೆ ಇರಿಸುಮುರುಸು ಉಂಟಾಗಿದೆ.

ಈ ನಡುವೆ ಬಪ್ಪನಾಡು ಬಳಿ ರಂಗನಾಥ ಶೆಟ್ಟಿ ಫ್ಲೆಕ್ಸ್ ಹಾಕುವ ವಿಷಯದಲ್ಲಿ ಬಿಜೆಪಿ ನಾಯಕರೊಬ್ಬರ ವಿರೋಧ ವ್ಯಕ್ತವಾಗಿದ್ದು ಸ್ಥಳಾಂತರಿಸಿ ಬೇರೆ ಪ್ಲೆಕ್ಸ್ ಅಳವಡಿಸಲಾಗಿದೆ.

ಒಟ್ಟಾರೆಯಾಗಿ ಮುಂಬರುವ ಜಿಪಂ ತಾಪಂ ಚುನಾವಣೆಗಳಿಗೆ ಪೀಠಿಕೆಯಾಗಿ ಎರಡು ಪಕ್ಷಗಳಿಂದ ಲೆಕ್ಕಾಚಾರ ಹಾಗೂ ಭರ್ಜರಿ ಸಿದ್ಧತೆ ನಡೆಯುತ್ತಿದೆ.

Edited By : Nagesh Gaonkar
Kshetra Samachara

Kshetra Samachara

06/08/2021 04:06 pm

Cinque Terre

40.26 K

Cinque Terre

0

ಸಂಬಂಧಿತ ಸುದ್ದಿ