ಮಂಗಳೂರು: ನನಗೆ ಪಕ್ಷ ಎರಡನೇ ಬಾರಿಗೆ ಸಚಿವ ಸ್ಥಾನಕ್ಕೆ ಅವಕಾಶ ನೀಡಿದ್ದು, ಇದಕ್ಕಾಗಿ ಎಲ್ಲೂ ಲಾಬಿ ಮಾಡಿಲ್ಲ. ಪಕ್ಷದ ಯಾವುದೇ ಮುಖಂಡರನ್ನು ಭೇಟಿಯಾಗಿಲ್ಲ. ಅಧಿಕಾರ ತಾನಾಗಿಯೇ ಬಂದಿದೆ ಎಂದು ಸಚಿವ ಅಂಗಾರ ಹೇಳಿದರು.
ಎರಡನೇ ಬಾರಿಗೆ ರಾಜ್ಯ ಸಚಿವರಾಗಿ ಆಯ್ಕೆಯಾದ ಬಳಿಕ ಬಿಜೆಪಿಯ ದ.ಕಜಿಲ್ಲಾ ಕಚೇರಿಗೆ ಮೊದಲ ಬಾರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರ ದೊರಕಿದಾಗ ಸಂತೋಷಪಟ್ಟದಕ್ಕಿಂತ ಮಿಗಿಲಾಗಿ ಕೊನೆಯ ಕ್ಷಣದವರೆಗೆ ಯಾರು ಮಂತ್ರಿಗಳು ಎಂಬ ಗೌಪ್ಯತೆಯನ್ನು ಕಾಪಾಡಿಕೊಂಡಿರೋದು ಅಭಿಮಾನ ಹಾಗೂ ವಿಶ್ವಾಸವನ್ನು ತಂದಿದೆ ಎಂದರು.
ಇಂತಹ ಗೌಪ್ಯತೆ ಹಾಗೂ ವಿಶ್ವಾಸದ ಆಧಾರದಲ್ಲಿಯೇ ನಮ್ಮ ಸಂಘಟನೆ ಆರಂಭವಾಗಿರೋದು ಹಾಗೂ ಬೆಳೆದು ಬಂದಿರೋದು. ಆದ್ದರಿಂದಲೇ ಎಂಥಹ ಸಂದರ್ಭದಲ್ಲಿಯೂ ನಮ್ಮ ಸಂಘಟನೆಯನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಎಸ್.ಅಂಗಾರ ಹೇಳಿದರು.
Kshetra Samachara
06/08/2021 03:18 pm