ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಲೋಕಾಯುಕ್ತಕ್ಕೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಮುಜರಾಯಿ ಮತ್ತು ದಕ್ಷಿಣ ಕನ್ನಡದ ಮಾಜಿ ಉಸ್ತುವಾರಿ ಸಚಿವ
ಕೋಟ ಶ್ರೀನಿವಾಸ್ ಪೂಜಾರಿ, ತಮ್ಮ ಹುಟ್ಟೂರಲ್ಲಿ ಮನೆ ಕಟ್ಟಿಸುತ್ತಿದ್ದಾರೆ.
ಸುಮಾರು 60 ಲಕ್ಷ ಮೌಲ್ಯದ ಮನೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದೆ.
ಸಿಂಪಲ್ ಶ್ರೀನಿವಾಸ್ ಪೂಜಾರಿ ಆರು ಕೋಟಿಯ ಮನೆ ಕಟ್ಟಿಸುತ್ತಿದ್ದಾರೆ ಎಂದು ನಿರ್ಮಾಣ ಹಂತದ ಮನೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೋಟ ಶ್ರೀನಿವಾಸ್ ಲೋಕಾಯುಕ್ತರಿಗೆ ಪತ್ರ ಮೂಲಕ ವಿನಂತಿ ಮಾಡಿದ್ದಾರೆ.
Kshetra Samachara
30/07/2021 05:44 pm