ಮಂಗಳೂರು: ಮೊಗವೀರ ಸಮುದಾಯವನ್ನು ಪರಿಶಿಷ್ಟ ವರ್ಗ (ಎಸ್‌ಟಿ)ಕ್ಕೆ ಸೇರ್ಪಡೆಗೊಳಿಸಬೇಕೆಂದು ನಗರದ ಬೋಳೂರಿನ 'ಫ್ರೆಂಡ್ಸ್ ಮೊಗವೀರ' ಸಂಘಟನೆಯ ಸದಸ್ಯರು ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರನ್ನು ತಮ್ಮ ಮಾರ್ಗದರ್ಶಕ, ಮೊಗವೀರ ಸಮಾಜದ ಮುಂದಾಳು ಹಾಗೂ ಉದ್ಯಮಿ ಜಗದೀಶ್ ಬೋಳೂರು ಅವರ ನೇತೃತ್ವದಲ್ಲಿ ಭೇಟಿಯಾಗಿ ಮನವಿ ಅರ್ಪಿಸಿದರು.
ಕರ್ನಾಟಕ ರಾಜ್ಯದಲ್ಲಿ ಮೊಗವೀರ ಜನಾಂಗದ ಮಂದಿ ಸುಮಾರು 65 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದಾರೆ. ಸಂವಿಧಾನದಲ್ಲಿ ಸಮುದ್ರ- ನದಿ, ಜಲಾಶಯ ಮತ್ತು ಕೆರೆಗಳ ಸನಿಹ ವಾಸಿಸುವ ಜನರಿಗೆ ಪರಿಶಿಷ್ಟ ವರ್ಗಕ್ಕೆ ಸೇರಿಸುವ ಸಂದರ್ಭ ಆದ್ಯತೆ ನೀಡಬೇಕೆಂಬ ಕುರಿತು ಉಲ್ಲೇಖಿಸಲಾಗಿದೆ ಎಂದು ಈ ಸಂದರ್ಭ ಸಂಸದರಿಗೆ ಮಾಹಿತಿ ಹಾಗೂ ಸಮಾಜದ ಸ್ಥಿತಿಗತಿ, ವೃತ್ತಿ ಬಗ್ಗೆ ತಿಳಿಸಲಾಯಿತು.
Kshetra Samachara
01/03/2021 12:21 pm