ಕುಂದಾಪುರ : 5 ವರ್ಷಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಗಂಗೊಳ್ಳಿ ಬಂದರಿನ ಜಟ್ಟಿಯ ಪುನರ್ ನಿರ್ಮಾಣವನ್ನು ಮಾಡುವಂತೆ ಒತ್ತಾಯಿಸಿದ್ದ ಸ್ಥಳೀಯ ಮೀನುಗಾರರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಉದ್ದೇಶಿತ ಕಾಮಗಾರಿಗಾಗಿ ೧೨ ಕೋಟಿ ರೂ. ಅನುದಾನವನ್ನು ನೀಡಿದ್ದಾರೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
ಇಲ್ಲಿಗೆ ಸಮೀಪದ ಗಂಗೊಳ್ಳಿ ಬಂದರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 12 ಕೋಟಿ ವೆಚ್ಚದ ಜೆಟ್ಟಿ ಮರು ನಿರ್ಮಾಣದ ಕಾಮಗಾರಿ ಮತ್ತು 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೇಶವೇ ಕೊರೊನಾ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ನೀಡಿರುವುದು ಮುಖ್ಯಮಂತ್ರಿಗಳಿಗೆ ಹಾಗೂ ಸಂಸದ ರಾಘವೇಂದ್ರ ಅವರಿಗೆ ಮೀನುಗಾರರ ಮೇಲೆ ಇರುವ ಕಾಳಜಿ ತೋರುತ್ತದೆ. ಕಾಮಗಾರಿಯಲ್ಲಿ ಗುಣ ಮಟ್ಟದ ಕಾಯ್ದುಕೊಳ್ಳಲು ಆಧ್ಯತೆ ನೀಡಲಾಗಿದೆ. ೧ ವರ್ಷದ ಒಳಗೆ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ. ಗಂಗೊಳ್ಳಿಯಿಂದ ಶಿರೂರು ವರೆಗಿನ ಮೀನುಗಾರಿಕಾ ರಸ್ತೆಗೆ ೧೨ ಕೋಟಿ ಅನುದಾನ ಒದಗಿಸಲಾಗಿದೆ. ಕೋಡೇರಿ ಬಂದರಿಗೆ ೨.೮೦ ಕೋಟಿ ಸೇರಿಒ ಒಟ್ಟು ೩೫ ಕೋಟಿ ರೂ. ಅನುದಾನವನ್ನು ನೀಡಲಾಗಿದೆ. ಬೈಂದೂರು೭ ವಿಧಾನ ಸಭಾ ಕ್ಷೇತ್ರಕ್ಕೆ ಈಗಾಗಲೇ ೧,೬೦೦ ಕೋಟಿ ಅನುದಾನ ಬಂದಿದೆ. ೫೫೦ ಕೋಟಿ ರೂಪಾಯಿಗಳಲ್ಲಿ ಕ್ಷೇತ್ರದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ. ಕುಂದಾಪುರ ಹಾಗೂ ಗಂಗೊಳ್ಳಿ ಸೇತುವೆ ನಿರ್ಮಾಣದಿಂದ ಮೀನುಗಾರಿಕೆಗೆ ಒಳ್ಳೆಯ ಮಾರುಕಟ್ಟೆ ದೊರಕುವುದರ ಜತೆಯಲ್ಲಿ ಗಂಗೊಳ್ಳಿ ಅಭಿವೃದ್ಧಿಯಾಗುತ್ತದೆ ಎನ್ನುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿಯೇ ಮೀನುಗಾರರ ಸಚಿವರು , ಮೀನುಗಾರರ ಹಾಗೂ ಪರಿಶಿಷ್ ಸಮುದಾಯದವರ ಮನೆಯಲ್ಲಿ ವಾಸ್ತವ್ಯ ಮಾಡುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
Kshetra Samachara
27/02/2021 09:39 am