ಉಡುಪಿ: ಪೊಗರು ಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ: ಸಂಸದೆ ಶೋಭಾ
ಉಡುಪಿ: ಪೊಗರು ಚಿತ್ರ ಹಿಂದೂ ಸಮಾಜದ ಭಾವನೆಗೆ ಧಕ್ಕೆ ಮಾಡಿದೆ. ಪೂಜಾ ಪದ್ಧತಿ, ಅರ್ಚಕರಿಗೆ ಅವಮಾನ ಮಾಡಿದೆ,
ಚಿತ್ರದಿಂದ ಶ್ರದ್ಧೆ, ಆಚಾರ ವಿಚಾರಕ್ಕೆ ಧಕ್ಕೆಯಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು,ಮನೆಯಲ್ಲಿ ಪೂಜೆ ಆಗಬೇಕೆಂದರೆ ಬ್ರಾಹ್ಮಣರನ್ನು ಕರೆಯುತ್ತಾರೆ. ಆಕ್ಷೇಪಾರ್ಹ ದೃಶ್ಯಗಳಿಗೆ ಸೆನ್ಸಾರ್ ಕತ್ತರಿ ಹಾಕಿಲ್ಲ ಯಾಕೆ? ಸೆನ್ಸಾರ್ ಮಂಡಳಿ ನಡೆ ಸಂಶಯಕ್ಕೆ ಎಡೆಮಾಡಿದೆ.ಪ್ರಚಾರ ಗಿಟ್ಟಿಸಿ ಹಣ ಮಾಡಬಹುದು ಎಂದು ಅಂದುಕೊಂಡಿರಬಹುದು.
ಇಂತಹ ಮಾನಸಿಕತೆಯನ್ನು ನಾವು ತೊಡೆದುಹಾಕಬೇಕು, ಪೊಗರು ಚಲನಚಿತ್ರ ಪ್ರದರ್ಶನಕ್ಕೆ ನನ್ನ ವಿರೋಧ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರವನ್ನು ವಾಪಸ್ ಪಡೆದರೆ ಸೆನ್ಸಾರ್ ಮಾಡಿ ಪ್ರದರ್ಶನ ನಿಲ್ಲಿಸಲು ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತಿದ್ದೇನೆ.ಚಿತ್ರದ ಕೆಲ ದೃಶ್ಯಗಳನ್ನು ಕಂಡು ನನಗೆ ಬಹಳ ನೋವಾಗಿದೆ.ನಿಮ್ಮ ದಾರ್ಷ್ಟ್ಯವನ್ನು ಬೇರೆ ಧರ್ಮಗಳಿಗೆ ತೋರಿಸಲು ಶಕ್ತಿ ಇದೆಯೇ?
ಇದು ಕೇವಲ ಬ್ರಾಹ್ಮಣರು ವಿರೋಧಿಸುವ ವಿಚಾರ ಅಲ್ಲ. ಪೂರ್ಣ ಹಿಂದೂ ಸಮಾಜ ಎದ್ದುನಿಂತು ವಿರೋಧಿಸಬೇಕು
ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.