ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯೋಜನೆಗಳು ಶೀಘ್ರ ಫಲಾನುಭವಿಗಳನ್ನು ತಲುಪಲು 10 ದಿನಗಳಿಗೊಮ್ಮೆ ಸಭೆ; ನಳಿನ್

ಮಂಗಳೂರು: ಕೇಂದ್ರ ಸರಕಾರದ ಯೋಜನೆಗಳು ಶೀಘ್ರ ಫಲಾನುಭವಿಗಳನ್ನು ತಲುಪಲು ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ಹತ್ತು ದಿನಕ್ಕೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಯೋಜನೆಗಳಿಗೆ ವೇಗ ಕೊಡುವ ಕಾರ್ಯ ಆಗಬೇಕು ಎಂದು ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು‌.

ದ.ಕ. ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ ಅವರು, ವಸತಿ ಯೋಜನೆಗಳಿಗೆ ಅಗತ್ಯವಿರುವ ಜಾಗದ ಸಮಸ್ಯೆ , ಫಲಾನುಭವಿಗಳ ಇನ್ನಿತರ ಸಮಸ್ಯೆಗಳಿಗೆ ಹತ್ತು ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಿದಲ್ಲಿ ಸಮಸ್ಯೆಗಳು ಶೀಘ್ರ ಇತ್ಯರ್ಥವಾಗುತ್ತದೆ‌. ಇದರಿಂದ ಯೋಜನೆಗಳು ಶೀಘ್ರ ಫಲಾನುಭವಿಗಳನ್ನು ತಲುಪಲು ಸಹಕಾರಿ ಆಗಲಿದೆ ಎಂದರು.

ನಗರದ ಕೆಂಜಾರಿನಲ್ಲಿ ಸ್ಥಾಪನೆಯಾಗುವ ಕೋಸ್ಟ್ ಗಾರ್ಡ್ ಅಕಾಡೆಮಿಯ ಜಾಗದಲ್ಲಿ ಖಾಸಗಿ ಗೋಶಾಲೆಯೊಂದು ಕಾರ್ಯಾಚರಿಸುತ್ತಿದ್ದು, ಅವರು ತೆರವುಗೊಳ್ಳುತ್ತಿಲ್ಲ ಎಂದ ಅಧಿಕಾರಿಗಳಿಗೆ ಖಾಸಗಿ ಗೋಶಾಲೆ ಸರಕಾರಿ ಜಾಗದಲ್ಲಿದ್ದಲ್ಲಿ ತಕ್ಷಣ ತೆರವುಗೊಳಿಸಿ ಎಂದು ಸೂಚನೆ ನೀಡಿದರು.

Edited By : Manjunath H D
Kshetra Samachara

Kshetra Samachara

22/02/2021 05:14 pm

Cinque Terre

12.15 K

Cinque Terre

0

ಸಂಬಂಧಿತ ಸುದ್ದಿ