ಮಂಗಳೂರು: ಪಿಎಫ್ ಐ ಬಿಜೆಪಿಗೇ 'ಬಿ' ಟೀಂ ಇದ್ದಂತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಭಾವೈಕ್ಯತೆ ಸಮಾವೇಶದ ನಿಮಿತ್ತ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಮಾತನಾಡಿದ ಸಿದ್ದರಾಮಯ್ಯ, ಪಿಎಫ್ ಐ - ಸಿದ್ದರಾಮಯ್ಯ ಒಂದೇ ಟೀಂ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಬಿಜೆಪಿಗೆ ಆಗೋದಾದ್ರೆ PFI, SDPI ಯನ್ನು ನಿಷೇಧ ಮಾಡಲಿ. ಬಿಜೆಪಿ ಬಳಿ PFI, SDPI ವಿರುದ್ಧ ದಾಖಲೆಗಳಿದೆ ಅಲ್ವಾ..? ಎಂದು ಪ್ರಶ್ನಿಸಿದ ಅವರು, ಈ ಕುರಿತು ಬಿಜೆಪಿ ನಾಯಕರು ಕೇಂದ್ರ ಸರಕಾರಕ್ಕೆ ಪ್ರಸ್ತಾಪ ಕಳುಹಿಸಿ ನಿಷೇಧಿಸಲಿ ಅಂದರು. ಇನ್ನು ಮಂಗಳೂರಿನ ಉಳ್ಳಾಲದಲ್ಲಿ PFI ಯುನಿಟಿ ಮಾರ್ಚ್ ಗೆ ಅವಕಾಶ ನೀಡಿದ್ದೇ ಬಿಜೆಪಿ. SDPI ರದ್ದು ಮಾಡೋಕೆ ಅವರಿಗೆ ಏನು ತೊಂದರೆ..? ಎಂದ ಅವರು, PFI, SDPI ಬೆಳೆಸುತ್ತಿರೋರೆ ಬಿಜೆಪಿಯವರು ಎಂದು ಆರೋಪಿಸಿದರು.
Kshetra Samachara
22/02/2021 02:13 pm