ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ ಕೆವಿಜಿ ಕಾಲೇಜಿನಲ್ಲಿ 'ಸ್ಪಂದನ' ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನೆ

ಸುಳ್ಯ:ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸಸ್ 25 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ 'ಸ್ಪಂದನ' ರಾಷ್ಟ್ರೀಯ ವಿಚಾರ ಸಂಕಿರಣವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಹಾಸ್ಪಿಟಲ್ ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಡಾ.ಭರತ್ ಶೆಟ್ಟಿ. ವೈ. ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ಆಯುರ್ವೇದ ಚಿಕಿತ್ಸೆ ಗೆ ತನ್ನದೇ ಆದ ಇತಿಹಾಸವಿದೆ.

ಬದಲಾದ ಕಾಲಘಟ್ಟದಲ್ಲಿ ಆಯುರ್ವೇದ ಚಿಕಿತ್ಸೆ ಬಗ್ಗೆ ಸಂಶೋಧನೆಗಳು‌ ನಡಿತಾ ಇದೆ. ಹೀಗಾಗಿ ಉತ್ತಮ ಭವಿಷ್ಯ ಇದೆ' ಅಂದ್ರು.‌ ವೇದಿಕೆಯಲ್ಲಿ ಡಾ.ಕೆ.ವಿ.ಚಿದಾನಂದ, ಡಾ.ಸುಮನ್ ಡಿ.ಪನ್ನೆಕರ್, ಡಾ.ಕಿರಣ್ ಕುಮಾರ್ ಎನ್, ಡಾ.ಶ್ರೀಧರ್ ಬಿ.ಎಸ್, ಡಾ.ಆನಂದ್ ಕಿರಿಶಲ್, ಪ್ರೊ.ಡಾ.ಕೆವಿ ದಿಲೀಪ್ ಕುಮರ್,ಡಾ.ಐಶ್ವರ್ಯ ಕೆಸಿ, ಡಾ.ಗೌತಮ್‌ ಗೌಡ, ಡಾ.ಶ್ರೀನಿವಾಸ ಕೆ.ಬನ್ನಿಗೋಲ್ ಉಪಸ್ಥಿತರಿದ್ದರು. ಡಾ.ಸತ್ಯನಾರಾಯಣ ಭಟ್ ಸ್ವಾಗತಿಸಿದರು. ಇಂದು ಮತ್ತು‌ ನಾಳೆ ವಿವಿಧ ವಿಷಯಗಳಲ್ಲಿ ವಿಚಾರ ಸಂಕಿರಣ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

20/02/2021 06:08 pm

Cinque Terre

8.67 K

Cinque Terre

0

ಸಂಬಂಧಿತ ಸುದ್ದಿ