ಉಡುಪಿ: ಭಾರತೀಯ ಲೆಕ್ಕ ಪರಿಶೋಧಕರ ಸಂಘ(ಐಸಿಎಐ) ದ ದಕ್ಷಿಣ ಭಾರತೀಯ ಪ್ರಾದೇಶಿಕ ಕೇಂದ್ರದ ಉಡುಪಿ ಶಾಖೆ ವತಿಯಿಂದ ಫೆ. 20ರಂದು ಬೆಳಗ್ಗೆ 9ರಿಂದ ಸಂಜೆ 7ರ ತನಕ ವಾರ್ಷಿಕ ಸಮ್ಮೇಳನ ಜ್ಞಾನ ಸಮ್ಮಿಲನ- 2021(ನಾಳಿನತ್ತ ನಾವೆಲ್ಲರೂ ಒಂದಾಗೋಣ) ನಡೆಯಲಿದೆ ಎಂದು ಉಡುಪಿ ಶಾಖೆ ಚೇರ್ಮನ್ ಸಿಎ ಪ್ರದೀಪ್ ಜೋಗಿ ಹೇಳಿದ್ದಾರೆ.
ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ವಿವರ ನೀಡಿದ ಅವರು,ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಳಗ್ಗೆ 9.30ಕ್ಕೆ ಸಮ್ಮೇಳನವನ್ನು ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ.
ಎಂ.ಪಿ. ವಿಜಯ ಕುಮಾರ್, ಮಂಗಳೂರು ಶಾಖೆ ಚೇರ್ಮನ್ ಎಸ್. ಎಸ್. ನಾಯಕ್ ಮುಖ್ಯ ಅತಿಥಿಗಳಾಗಿದ್ದಾರೆ. ಈ ಸಂದರ್ಭ ಹಿರಿಯ ಲೆಕ್ಕಪರಿಶೋಧಕರಾದ ಸಾಯಿರಾಮ್, ರೇಖಾ ದೇವಾನಂದ್, ಗುರುರಾಜ್ ಶೆಣೈ ಅವರನ್ನು ಸನ್ಮಾನಿಸಲಾಗುವುದು ಎಂದರು.
ಭವಿಷ್ಯದ ಲೆಕ್ಕಪರಿಶೋಧನೆ ವೃತ್ತಿ ಕುರಿತು ಸಿಎ ಎಂ.ಪಿ. ವಿಜಯ ಕುಮಾರ್ ಮಾತನಾಡುವರು. ತಾಂತ್ರಿಕ ಗೋಷ್ಠಿಗಳಲ್ಲಿ ವಿವಿಧ ವಿಷಯವಾಗಿ ಸಿಎ ಅನಂತನಾರಾಯಣ ಪೈ ಕೆ. ಉಡುಪಿ, ಸಿಎ ಎಸ್. ಎಸ್. ನಾಯಕ್ ಮಂಗಳೂರು, ಸಿಎ ವಿನಾಯಕ್ ಹೆಗ್ಡೆ ಬೆಂಗಳೂರು ವಿಚಾರ ಮಂಡಿಸುವರು ಎಂದು ಮಾಹಿತಿ ನೀಡಿದರು.
Kshetra Samachara
18/02/2021 06:54 pm