ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: RSS, ಸಂಘ ಪರಿವಾರದ ಮುಖಂಡರಿಗೆ SDPI ಮುಖಂಡನಿಂದ ಎಚ್ಚರಿಕೆ..!

ಉಳ್ಳಾಲದಲ್ಲಿ ನಡೆ‍ದ ಪಿಎಫ್ ಐ ಸಮಾವೇಶದಲ್ಲಿ RSS, ಸಂಘ ಪರಿವಾರದ ಮುಖಂಡರಿಗೆ SDPI ಮುಖಂಡರೋರ್ವರು ಎಚ್ಚರಿಕೆ ಹಾಕಿದ ಘಟನೆ ನಡೆದಿದೆ.ಎಸ್ ಡಿ ಪಿ ಐ ಮುಖಂಡ ಅನಂದ್ ಮಿತ್ತಬೈಲು ಎಂಬುವವರು ಮಾತನಾಡಿ,

ಕಲ್ಲಡ್ಕ ಪ್ರಭಾಕರ್ ಭಟ್ ಉಳ್ಳಾಲವನ್ನು ಪಾಕಿಸ್ತಾನ ಮಾಡುತ್ತೇವೆ ಅಂತಾರೆ. ಸ್ವಾಮಿ‌, ನಿಮಗೆ ಪಾಕ್ ಮೇಲೆ ಗೌರವ, ಪ್ರೀತಿ ಅಷ್ಟು ಇದ್ರೆ ನಿಮ್ಮನ್ನು ಪಿಎಫ್ ಐ ಒದ್ದೋಡಿಸುತ್ತದೆ.ನೀವು ಪಾಕಿಸ್ತಾನಕ್ಕೆ ಹೋಗಿ ಅಸ್ತಿತ್ವ ಕಟ್ಟಿಕೊಳ್ಳಿ ಎಂದು ಸವಾಲೆಸೆದಿದ್ದಾರೆ.

ನೀವು ಪದೇ ಪದೇ ಪಾಕಿಸ್ತಾನವನ್ನು ನೆನಪಿಸುತ್ತೀರಿ. ಆದ್ರೆ ಭಾರತದ ಒಂದು ಇಂಚನ್ನು ಇತರರು ಆಕ್ರಮಿಸಲು ಪಿಎಫ್ ಐ ಸೇನಾನಿಗಳು ಬಿಡಲ್ಲ. ಭಾರತವನ್ನು ಆರ್ ಎಸ್ ಎಸ್ ನವರು ಆಕ್ರಮಿಸಲು ಪಿಎಫ್ ಐ ಬಿಡಲ್ಲ ಎಂದು ಎಚ್ಚರಿಕೆ ನೀಡಿದರು. ನೀವು ನಡೆಸುವ ಷಡ್ಯಂತ್ರ, ಕುತಂತ್ರದ ವಿರುದ್ಧ ಈ ದೇಶದ ಗಲ್ಲಿ ಗಲ್ಲಿಗಳಲ್ಲಿ ನಮ್ಮ PFI ಸೇನಾನಿಗಳು ಇದ್ದಾರೆ. ಪಿಎಫ್ ಐ ಸೇನಾನಿಗಳ ಒದೆಗೆ ನೀವು ಕರಾಚಿಯ ಜಹಾಂಗೀರ್ ಮೈದಾನದಲ್ಲಿ ಬೀಳ್ಬೇಕು ಎಂದ ಅವ್ರು ಆರ್ ಎಸ್ ಎಸ್, ಸಂಘಟನೆಯ ಮುಖಂಡರಿಗೆ , ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯನಿಂದ ಎಚ್ಚರಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

18/02/2021 11:48 am

Cinque Terre

17.01 K

Cinque Terre

7

ಸಂಬಂಧಿತ ಸುದ್ದಿ