ಬಂಟ್ವಾಳ: ಖಾಸಗಿ ದೇವಾಲಯಗಳನ್ನೆಲ್ಲ ಕರ್ನಾಟಕ ಸರಕಾರ ವಶಕ್ಕೆ ಪಡೆಯುವ ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಆ ವಿಚಾರದ ಪ್ರಸ್ತಾಪವೇ ಇಲ್ಲ ಎಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಸ್ಪಷ್ಟಪಡಿಸಿದ್ದಾರೆ.
ಕೆಲವೊಂದು ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ, ಸಂದೇಶ ರವಾನೆಯಾಗುತ್ತಿದ್ದು, ಇದು ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಸರಕಾರದ ಬಳಿ ಧಾರ್ಮಿಕ ದತ್ತಿಗೆ ಒಳಪಡುವ ದೇವಸ್ಥಾನಗಳಲ್ಲದೆ, ಖಾಸಗಿ ದೇವಸ್ಥಾನಗಳ ಕುರಿತ ಮಾಹಿತಿ ಸಂಗ್ರಹ ಮಾಡುವುದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಈ ವದಂತಿ ಹಬ್ಬಿಸಲಾಗುತ್ತಿದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಿಂದುಗಳ ಹಿತರಕ್ಷಣೆ ಮಾಡುತ್ತವೆಯೇ ವಿನಹ ಖಾಸಗಿ ದೇವಾಲಯಗಳನ್ನು ಸರಕಾರದ ವಶಕ್ಕೆ ಪಡೆಯುವುದಿಲ್ಲ. ಅಂಥ ತೀರ್ಮಾನವನ್ನು ರಾಜ್ಯದ ಧಾರ್ಮಿಕ ಪರಿಷತ್ತು ತೆಗೆದುಕೊಂಡಿಲ್ಲ, ಸಚಿವರೂ ತೆಗೆದುಕೊಂಡಿಲ್ಲ. ಹಿಂದೂ ದೇವಾಲಯಗಳ ರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kshetra Samachara
04/02/2021 05:10 pm