ಮಂಗಳೂರು: ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ತಣ್ಣೀರುಬಾವಿ ಸಮುದ್ರದಲ್ಲಿ ಈಜಿ ದಾಖಲೆ ನಿರ್ಮಿಸಿದ ಈಜುಪಟುವಿನ ಸಾಧನೆ ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹರಿಯಾಣ ಕಚೇರಿಯಿಂದ ಪ್ರಮಾಣ ಪತ್ರ, ಮೆಡಲ್ ನೀಡಿ ಪುರಸ್ಕರಿಸಲಾಯಿತು.
ಶಿಕ್ಷಕ ನಾಗರಾಜ ಖಾರ್ವಿಯವರು ಡಿ.18ರಂದು ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಬೀಗ ಹಾಕಿ ತಣ್ಣೀರುಬಾವಿ ಪ್ರದೇಶದ ಸಮುದ್ರದಲ್ಲಿ ಒಂದು ಕಿ.ಮೀ. ದೂರವನ್ನು 25 ನಿಮಿಷ 16 ಸೆಕೆಂಡ್ ಗಳಲ್ಲಿ ಈಜಿ ಸಾಧನೆ ಮಾಡಿದ್ದರು. ಈ ದಾಖಲೆ ಪರಿಗಣಿಸಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹರಿಯಾಣ ಕಚೇರಿಯು ಅವರಿಗೆ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಿದೆ.
ನಾಗರಾಜ ಖಾರ್ವಿಯವರು ಈ ಸಾಧನೆಯ ಬಗ್ಗೆ ಮಾತನಾಡಿ, ನನ್ನ ಸಾಧನೆ ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹರಿಯಾಣ ಕಚೇರಿಯು ಪ್ರಮಾಣ ಪತ್ರ, ಮೆಡಲ್ ನೀಡಿ ಪುರಸ್ಕರಿಸುವುದು ಸಂತೋಷ ತಂದಿದೆ. ಅಲ್ಲದೆ ಅಂದು ರಾಜ್ಯ, ರಾಷ್ಟ್ರಾದ್ಯಂತ ಎಲ್ಲ ಪತ್ರಿಕೆ ಹಾಗೂ ಟಿ.ವಿ. ವಾಹಿನಿಗಳು ಸುದ್ದಿ ಬಿತ್ತರಿಸಿತ್ತು. ಈ ವರದಿ ನೋಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಕಚೇರಿ ಮುಖ್ಯಸ್ಥರೇ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಅಲ್ಲದೆ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೂ ಅಭಿನಂದಿಸಿರುವುದು ಸಂತೋಷ ತಂದಿದೆ ಎಂದರು.
Kshetra Samachara
02/02/2021 08:26 pm