ಮಂಗಳೂರು: ಯಾರೋ ಒಬ್ರು ಹೇಳಿಕೆ ನೀಡಿದರೂ ಅಂತ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋಲ್ಲ ಎಂದು ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಪೂರ್ಣಾವಧಿ ಯಡಿಯೂರಪ್ಪನವರೇ ಆಗಿರುತ್ತಾರೆ. ಈ ನಿರ್ಧಾರ ಕೇಂದ್ರದ್ದು. ಯತ್ನಾಳ್ ಈ ರೀತಿಯ ಗೊಂದಲಗಳನ್ನು ಮಾಡುವುದು ಸೂಕ್ತ ಅಲ್ಲ ಎಂದು ಹೇಳಿದ ಕುಮಾರ್ ಬಂಗಾರಪ್ಪ, ಈಗಾಗಲೇ ಯತ್ನಾಳ್ ಅವರಿಗೆ ಕೇಂದ್ರ ಎಚ್ಚರಿಕೆ ಕೂಡ ನೀಡಿದೆ. ಪಕ್ಷದ ವಿರುದ್ಧ ಬೇಕಾಬಿಟ್ಟಿ ಹೇಳಿಕೆ ನೀಡುವುದು ಸರಿಯಲ್ಲ. ಕೇಂದ್ರ ಈ ಬಗ್ಗೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದರು. ರಾಜಕಾರಣದಲ್ಲಿ ಎಲ್ಲರಿಗೂ ಮುಂದೆ ಬರಬೇಕೆಂಬ ಇಚ್ಛೆ ಇರುತ್ತದೆ. ಆದ್ರೆ ಯಾರನ್ನೋ ತುಳಿದು ಮೇಲೆ ಬರಬೇಕಾಗಿಲ್ಲ. ಅದರ ಬದಲಿಗೆ ಉತ್ತಮ ಕೆಲಸ ಮಾಡಿ, ಜನಮನ್ನಣೆ ಗಳಿಸಿ ಸ್ಥಾನ ಪಡೆದುಕೊಳ್ಳಬೇಕು ಎಂದರು.
Kshetra Samachara
31/01/2021 09:51 am