ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೈತ ವಿಧೇಯಕ ಜಾರಿಯಿಂದ ಕೃಷಿಕರ ಸಹಿತ ಜನಸಾಮಾನ್ಯರಿಗೂ ಸಂಕಷ್ಟ; ಎಸ್ ಡಿಪಿಐ

ಮಂಗಳೂರು: ಕೇಂದ್ರದ ಬಿಜೆಪಿ ಸರಕಾರ ಮೂರು ರೈತ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸಲು ಯತ್ನಿಸುತ್ತಿದ್ದು, ಈ ವಿಧೇಯಕಗಳು ಜಾರಿಯಾದಲ್ಲಿ ರೈತಾಪಿ ವರ್ಗ ಮಾತ್ರವಲ್ಲ, ದೇಶದ ಜನಸಾಮಾನ್ಯರು ಭಾರಿ ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದು ಎಸ್ ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದರು.

"ಕೃಷಿ ವಿರೋಧಿ ಕಾನೂನುಗಳನ್ನು ಹಿಂಪಡೆಯಿರಿ, ರೈತರ ಬೇಡಿಕೆಗಳನ್ನು ಈಡೇರಿಸಿ" ಎಂದು ಆಗ್ರಹಿಸಿ ಮಂಗಳೂರು ಮನಪಾ ಮುಂಭಾಗ ನಡೆದ ರೈತ ಐಕ್ಯತಾ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಮುಂದುವರಿಯುತ್ತಿರುವ ದೇಶವಾಗಿದ್ದು, ಕೇಂದ್ರದ ಬಿಜೆಪಿ ಸರಕಾರ ರೈತ ವಿರೋಧಿ, ಜನವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಇನ್ನಷ್ಟು ಹಿಂದುಳಿದ ದೇಶವಾಗಿ ಮಾರ್ಪಡಿಸುತ್ತಿದೆ ಎಂದರು.

ಈ ಸಂದರ್ಭ ದೆಹಲಿಯ ರೈತ ಚಳುವಳಿಯನ್ನು ಬೆಂಬಲಿಸಿ ಎಸ್ ಡಿಪಿಐ, ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿತು.

Edited By : Nagesh Gaonkar
Kshetra Samachara

Kshetra Samachara

26/01/2021 09:20 pm

Cinque Terre

10.56 K

Cinque Terre

1

ಸಂಬಂಧಿತ ಸುದ್ದಿ