ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹಾಗೂ ಎಂಎಲ್ ಸಿ ಹರೀಶ್ ಕುಮಾರ್ ಧ್ವಜಾರೋಹಣಗೈದರು.
ಇದೇ ವೇಳೆ ಮಾತನಾಡಿದ ಅವರು, ರೈತರ ಪ್ರತಿಭಟನೆ ಈ ಸಮಯದಲ್ಲಿ ನಡೆಯುತ್ತಿರೋದು ಖೇದಕರ. ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಸ್ಪಂದನೆ ನೀಡುತ್ತಿಲ್ಲ. ಇದು ಖಂಡನೀಯ. ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಾದದ್ದು ನಮ್ಮ ಕರ್ತವ್ಯ ಅಂದ್ರು.
ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಯುಟಿ ಖಾದರ್, ಅಂಬೇಡ್ಕರ್ ಹೇಳಿದ ಸಂವಿಧಾನದ ರೀತಿಯಲ್ಲಿ ಸರ್ಕಾರ ಹೋಗ್ತಿಲ್ಲ. ಪ್ರತಿಭಟನೆ ನಡೆಯುತ್ತಿದ್ರೂ ಪರಿಹಾರ ಸಿಗ್ತಿಲ್ಲ. ಸಂವಿಧಾನವನ್ನು ಉಳಿಸುವ ಕೆಲಸವನ್ನು ನಾವು ಮಾಡ್ಬೇಕಾಗಿದೆ ಅಂದ್ರು.
ಇದೇ ವೇಳೆ ಮನಪಾ ವಿರೋಧ ಪಕ್ಷದ ನಾಯಕ ರವೂಫ್ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
26/01/2021 12:38 pm