ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ಯಾಬಿನೆಟ್ ಕಮಿಟಿಯಲ್ಲಿ ಚರ್ಚೆಯಾಗುವ ವಿಚಾರ ಹೇಗೆ ಹೊರಬರುತ್ತದೆ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ತನಿಖೆಗೆ ಒತ್ತಾಯ..

ಮಂಗಳೂರು: ಕ್ಯಾಬಿನೆಟ್ ಕಮಿಟಿಯಲ್ಲಿ‌ ಚರ್ಚೆಯಾಗುವ, ಗೌಪ್ಯತೆ ಕಾಪಾಡಬೇಕಾದ ವಿಚಾರ ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ತಿಳಿಯುತ್ತದೆ ಎಂದಾದಲ್ಲಿ ಇದು ದೇಶದ್ರೋಹದ ಕೆಲಸವಾಗಿದೆ.

ನೇರವಾಗಿ ಇದರ ಹೊಣೆಯನ್ನು ಪ್ರಧಾನಿ ಮೋದಿಯವರು ಹೊತ್ತುಕೊಂಡು ಜಂಟಿ‌ ಸಂಸತ್ ಸಮಿತಿ ರಚಿಸಿ ಮಾಹಿತಿ ಸೋರಿಕೆ ಮಾಡಿದವರು ಯಾರೆಂದು ತನಿಖೆ ನಡೆಸಿ ಅವರನ್ನು ವಜಾಗೊಳಿಸಲಿ.ಅಲ್ಲದೇ ಅವರ ಮೇಲೆ ದೇಶದ್ರೋಹದ ಕಾನೂನಡಿ‌ ಶಿಕ್ಷೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಆಗ್ರಹಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕ್ಯಾಬಿನೆಟ್ ಕಮಿಟಿಯಲ್ಲಿ ದೇಶದ ಪ್ರಧಾನಮಂತ್ರಿ, ಗೃಹ ಸಚಿವರು, ವಿದೇಶಾಂಗ ಸಚಿವರು, ಹಣಕಾಸು ಸಚಿವರು, ರಕ್ಷಣಾ ಸಚಿವರು ಮಾತ್ರ ಇರುತ್ತಾರೆ, ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದ ಗೌಪ್ಯ ನಿರ್ಣಯವನ್ನು ಈ ತಂಡ ತೆಗೆದುಕೊಳ್ಳುತ್ತದೆ. ಹಾಗಾದಲ್ಲಿ ಕ್ಯಾಬಿನೆಟ್ ಕಮಿಟಿಯಲ್ಲಿ ಚರ್ಚೆಯಾಗುವ ವಿಚಾರ ಹೇಗೆ ಹೊರಬರುತ್ತದೆ ಎಂದು ತನಿಖೆಯಾಗಲಿ ಎಂದರು

Edited By : Manjunath H D
Kshetra Samachara

Kshetra Samachara

23/01/2021 05:01 pm

Cinque Terre

16.7 K

Cinque Terre

1

ಸಂಬಂಧಿತ ಸುದ್ದಿ