ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿದ ಅರ್ನಾಬ್ ನನ್ನು ಜೈಲಿಗಟ್ಟಿ; ಎಸ್ ಡಿಪಿಐ

ಮಂಗಳೂರು: ದೇಶದ ಆಂತರಿಕ ಸೂಕ್ಷ್ಮ ವಿಚಾರಗಳ ಮಾಹಿತಿ ಸೋರಿಕೆ ಮಾಡಿ, ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡಿರುವ ಪತ್ರಕರ್ತ ಅರ್ನಾಬ್ ನನ್ನು ಜೈಲಿಗಟ್ಟಿ ಎಂದು ಎಸ್ ಡಿಪಿಐ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಪ್ರತಿಭಟನಾಕಾರರು ಅರ್ನಾಬ್ ಗೋಸ್ವಾಮಿ‌ ವಿರುದ್ಧ ಘೋಷಣೆ ಕೂಗಿದರು.

ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಮಾತನಾಡಿ, ಪುಲ್ವಾಮ ದಾಳಿ ವಿಚಾರವನ್ನು ಅರ್ನಾಬ್ ಗೋಸ್ವಾಮಿ ಮಾಜಿ ಬಾರ್ಕ್ ಸಿಇಒಗೆ ಮಾಹಿತಿ ಸೋರಿಕೆ ಮಾಡಿದ್ದಾನೆ. ದೇಶದ ಆಂತರಿಕತೆಗೆ ಸಂಬಂಧಪಟ್ಟಿರುವ ಸೈನಿಕರ ವಿಚಾರ ಅರ್ನಾಬ್ ಗೋಸ್ವಾಮಿಗೆ ಹೇಗೆ ತಿಳಿಯುತ್ತದೆ. ಆದ್ದರಿಂದ ಮಹಾರಾಷ್ಟ್ರ ಸರಕಾರ ತಕ್ಷಣ ಆತನನ್ನು ಜೈಲಿಗಟ್ಟಲಿ ಎಂದು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/01/2021 08:56 pm

Cinque Terre

12.98 K

Cinque Terre

2

ಸಂಬಂಧಿತ ಸುದ್ದಿ