ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಸರಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರಕುವ ಸೌಲಭ್ಯ ಶೀಘ್ರ ಬಿಡುಗಡೆಯಾಗಲಿ"

ಮಂಗಳೂರು: ಸರಕಾರದ ವತಿಯಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರಕುವ ಅನೇಕ ಸೌಲಭ್ಯಗಳು ತಡೆಯಾಗಿದ್ದು, ಈ ಬಗ್ಗೆ ಸರಕಾರ ಕ್ರಮ ಕೈಗೊಂಡು ಸೌಲಭ್ಯ ಶೀಘ್ರ ಬಿಡುಗಡೆ ಮಾಡಬೇಕೆಂದು ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಯೂಸುಫ್ ವಕ್ತಾರ್ ಒತ್ತಾಯಿಸಿದರು.

ಪ್ರೆಸ್ ಕ್ಲಬ್ ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷದಲ್ಲಿ ಸರಕಾರದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ದೊರಕುವ ಅನೇಕ ಸೌಲಭ್ಯಗಳು ಕೇವಲ‌ 60 ಶೇಕಡಾ ಮಾತ್ರ ದೊರಕಿದ್ದು, ಇನ್ನೂ 40 ಶೇಕಡಾ ಬಾಕಿಯಿದೆ. ಅಲ್ಲದೆ ಅರಿವು ಸಾಲ ಯೋಜನೆ ಇನ್ನೂ ಪ್ರಕಟವಾಗಿಲ್ಲ. ಅಲ್ಲದೆ, ಕಳೆದ ಬಾರಿಯ ಸಾಲವೇ ಇನ್ನೂ ಮಂಜೂರಾಗಿಲ್ಲ. ಈಗಾಗಲೇ ಶಾಲಾ- ಕಾಲೇಜುಗಳಲ್ಲಿ ದಾಖಲಾತಿಯಾಗಿದ್ದು, ಯೋಜನೆ ಇನ್ನೂ ಪ್ರಕಟಗೊಳ್ಳದ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.

ವಿದೇಶಿ ವ್ಯಾಸಂಗ ಸಾಲವನ್ನೇ ನಂಬಿ‌ ಹಲವಾರು ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಈಗಾಗಲೇ ತೆರಳಿದ್ದಾರೆ. ಈ ಯೋಜನೆಗೂ ಸರಕಾರ ತಡೆ ನೀಡಿದೆ. ಇದರಿಂದ ಈಗಾಗಲೇ ವಿದೇಶಕ್ಕೆ ತೆರಳಿರುವ ವಿದ್ಯಾರ್ಥಿಗಳು ವಿದೇಶಿ ವ್ಯಾಸಂಗವನ್ನು ಮೊಟಕುಗೊಳಿಸಿ ತಾಯ್ನಾಡಿಗೆ ಮರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸರಕಾರ ಶೀಘ್ರ ಇದಕ್ಕೆ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದರು.

ಬಿಪಿಲ್ ಕಾರ್ಡುದಾರ ಅಲ್ಪಸಂಖ್ಯಾತ ಯುವತಿಯರ ವಿವಾಹಕ್ಕೆ 50 ಸಾವಿರ ರೂ. ನೀಡುವ ಯೋಜನೆ ಜಾರಿಯಲ್ಲಿತ್ತು. ಆದರೆ, ಈ ಬಾರಿ ಈ ಯೋಜನೆಯ ಪ್ರಕಟಣೆ ಇನ್ನೂ ಆಗಿಲ್ಲ‌. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಇದಕ್ಕೆ ಅರ್ಜಿ ಪ್ರಕಟಿಸಬೇಕು. ಅಲ್ಲದೆ, ಈಗಿರುವ 50 ಸಾವಿರ ರೂ.ವನ್ನು 1 ಲಕ್ಷ ರೂ.ಗೆ ಏರಿಸಬೇಕೆಂದು ಯೂಸಫ್ ವಕ್ತಾರ್ ಸರಕಾರವನ್ನು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

21/01/2021 07:01 pm

Cinque Terre

25.74 K

Cinque Terre

3

ಸಂಬಂಧಿತ ಸುದ್ದಿ