ಮುಲ್ಕಿ:ಅಕ್ಷಯ ಪತ್ರಿಕೆಯ ಸಂಪಾದಕರು, ಭಾರತ್ ಬ್ಯಾಂಕ್ ನ ಮಾಜೀ ಕಾರ್ಯಧ್ಯಕ್ಷರು,ಸಾಹಿತಿ, ಬಿಲ್ಲವ ಸಮಾಜದ ನಾಯಕರು ದಿ.ಎಂ. ಬಿ. ಕುಕ್ಯಾನ್ ರವರಿಗೆ ಶೃದ್ದಾಂಜಲಿ ಕಾರ್ಯಕ್ರಮ ಹೊಸ ಅಂಗಣ ಮಾಸಪತ್ರಿಕೆಯ ನೇತೃತ್ವದಲ್ಲಿ ಮೂಲ್ಕಿಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ ದಿ. ಎಂಬಿ ಕುಕ್ಯಾನ್ ಸಾಹಿತ್ಯ ಸಹಿತ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕ ರಾಗಿದ್ದು ಯುವಜನಾಂಗ ಅದನ್ನು ಮುಂದುವರಿಸಬೇಕಾಗಿದೆ ಎಂದರು.
ಜನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಮಾತನಾಡಿ ಎಂ.ಬಿ.ಕೂಕ್ಯಾನ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ನಿಗರ್ವಿ, ವಿನಯವಂತ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅವರ ಕೊಡುಗೆ ಅಪಾರ ಎಂದರು.
ರಂಗಕರ್ಮಿ ಚಂದ್ರಶೇಖರ ಸುವರ್ಣ ಮಾತನಾಡಿ ತಮ್ಮ ಜೀವನದಲ್ಲಿ ಬಡವಿದ್ಯಾರ್ಥಿಗಳಿಗೆ ವಿದ್ಯೆಗೆ ಪ್ರೋತ್ಸಾಹ ನೀಡಿದ ಅಪರೂಪದ ವ್ಯಕ್ತಿಯಾಗಿದ್ದು ಅವರ ಜೀವನ ಇಂದಿನ ಯುವಕರಿಗೆ ಮಾದರಿ ಎಂದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರ ಕಲ್, ಸಾಹಿತಿ ದಯಾ ಮಣಿ ಶೆಟ್ಟಿ, ಡಾ. ಅಚ್ಚುತ ಕುಡ್ವ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ವೈಎನ್ ಸಾಲ್ಯಾನ್, ವಾಮನ ನಡಿಕುದ್ರು, ಸಾಧು ಅಂಚನ್ ಮಟ್ಟು ಮಾತನಾಡಿದರು. ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಹರಿಶ್ಚಂದ್ರ ಸಾಲಿಯಾನ್ ನಿರೂಪಿಸಿದರು.
Kshetra Samachara
12/01/2021 07:39 pm