ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಮತ ಎಣಿಕಾ ಕೇಂದ್ರದ ಹೊರಭಾಗದಲ್ಲಿ ಸಂಭ್ರಮಾಚರಣೆ ಶುರುವಾಗಿದೆ.
ಉಡುಪಿ ತಾಲೂಕಿನ ಮತ ಎಣಿಕೆ ನಗರದ ಸೈಂಟ್ ಸಿಸಲೀಸ್ ಶಾಲೆಯಲ್ಲಿ ನಡೆಯುತ್ತಿದೆ. ಸುಮಾರು 1005 ಗ್ರಾಮಪಂಚಾಯತ್ ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. 600ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ.
ಎಣಿಕೆ ಕೇಂದ್ರದ ಹೊರ ಭಾಗದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಕಮಲದ ಹೂವು ಹಿಡಿದು ಸಂಭ್ರಮಾಚರಣೆ ನಡೆಸಿದರು. ವಿಜಯೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಜೈಘೋಷಕ್ಕೆ ತೃಪ್ತಿಪಟ್ಟುಕೊಂಡರು.
Kshetra Samachara
30/12/2020 06:08 pm