ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಜ್ಯಾದ್ಯಂತ ಬಿಜೆಪಿ ಪರ ಉತ್ತಮ ಒಲವು,ಗೆಲುವು ನಮ್ಮದೇ: ನಳಿನ್ ಕುಮಾರ್ ಕಟೀಲು

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಗೆ ಬಿಜೆಪಿ ಉತ್ತಮ ಪೂರ್ವತಯಾರಿ ಮಾಡಿಕೊಂಡಿತ್ತು.ಬಿಜೆಪಿ ಹಮ್ಮಿಕೊಂಡ ಕುಟುಂಬ ಮಿಲನ, ಪಂಚರತ್ನ ಯೋಜನೆಗಳು ಯಶಸ್ವಿಯಾಗಿವೆ.

ನಮ್ಮ ಕಾರ್ಯಕರ್ತರಿಗೆ ರಾಜ್ಯಾದ್ಯಂತ ಅಭೂತಪೂರ್ವ ಬೆಂಬಲ ಸಿಕ್ಕಿದೆ.ಹೀಗಾಗಿ ಪ್ರಧಾನಿ ಮೋದಿ- ಸಿಎಂ ಯಡಿಯೂರಪ್ಪ ಅಭಿವೃದ್ಧಿ ಕಾರ್ಯ ವೇ ನಮಗೆ ಶ್ರೀರಕ್ಷೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ,ರಾಜ್ಯಾದ್ಯಂತ ಬಿಜೆಪಿ ಪರ ಒಲವು ಕಂಡುಬರುತ್ತಿದೆ.ಎರಡೂ ಹಂತದ ಚುನಾವಣೆಯಲ್ಲಿ ಉತ್ತಮ ಶೇಕಡವಾರು ಮತದಾನ ಆಗಿದೆ.

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳಿಗೆ ಕೊರತೆಯಾಗಿತ್ತು.ಮತಗಟ್ಟೆಯಲ್ಲಿ ಕೆಲಸ ಮಾಡಲು ಕಾರ್ಯಕರ್ತರೇ ಇರಲಿಲ್ಲ.ಸದ್ಯ ಕಾಂಗ್ರೆಸ್ ಮುಳುಗುವ ಹಡಗು ಆಗಿದೆ ರಾಜ್ಯದಲ್ಲಿ ಕಾಂಗ್ರೆಸ್ ಆಕ್ಸಿಜನ್ ನಲ್ಲಿದೆ ಎಂದರು.

ನಳಿನ್ ಕಚೇರಿಗೆ ಪಿಎಫ್ ಐ ಕಾರ್ಯಕರ್ತರಿಂದ ಮುತ್ತಿಗೆ ವಿಚಾರವಾಗಿ ಮಾತನಾಡಿದ ಅವರು ಕೆಎಫ್ ಡಿ ದೇಶದ್ರೋಹಿ ಚಟುವಟಿಕೆ ನಡೆಸುತ್ತಿದೆ.ಕಾನೂನು ತನ್ನದೇ ಕ್ರಮಕೈಗೊಳ್ಳುತ್ತದೆ.

ಈ ತರದ ಯಾವುದೇ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ.ಯಾವುದೇ ಬಂಧನ ಆದಾಗ ಕಾನೂನು ಪ್ರಕಾರ ಹೋರಾಟ ಮಾಡಬೇಕೇ ಹೊರತು ಮುತ್ತಿಗೆ ಹಾಕುವುದಲ್ಲ.

ಮುತ್ತಿಗೆ ಹಾಕುವುದೇ ಒಂದು ರೀತಿಯ ಭಯೋತ್ಪಾದನಾ ಚಟುವಟಿಕೆ.ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಗಂಭೀರತೆ ಪಡೆದುಕೊಳ್ಳಲಿದೆ.

ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಗೋಡೆ ಬರಹದಲ್ಲಿ ಬರೆಯಲಾಗಿತ್ತು.ಎಲ್ಲಾ ಕೃತ್ಯದ ಹಿಂದೆ ಭಯೋತ್ಪಾದನಾ ಚಟುವಟಿಕೆ ಇದೆ ಅನಿಸುತ್ತದೆ.

ನಮ್ಮ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.ಎಲ್ಲದಕ್ಕೂ ಉತ್ತರ ನೀಡಲು ನಮ್ಮ ಸರಕಾರ ಸಿದ್ಧವಾಗಿದೆ ಎಂದು ಹೇಳಿದರು.

Edited By : Manjunath H D
Kshetra Samachara

Kshetra Samachara

27/12/2020 07:17 pm

Cinque Terre

18.7 K

Cinque Terre

17

ಸಂಬಂಧಿತ ಸುದ್ದಿ