ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ: ಸಚಿವೆ ಶೋಭಾ ವಾಗ್ದಾಳಿ

ಉಡುಪಿ: ಈ ದೇಶದ ಕಾನೂನನ್ನು ನ್ಯಾಯಾಲಯದ ತೀರ್ಪನ್ಬು ಪಾಲಿಸದೆ ಕೇವಲ ಹಿಜಾಬ್ ಗಾಗಿ ಗಲಾಟೆ ಮಾಡುವವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.ಹೆಣ್ಣು ಮಕ್ಕಳಿಗೆ ಶಿಕ್ಷಣ ಮುಖ್ಯ.ನೀವು ಕಲಿತು ನಿಮ್ಮ ಕಾಲ ಮೇಲೆ ನಿಲ್ಲಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ಕೋರ್ಟ್ ತೀರ್ಪು ಸ್ಪಷ್ಟ ಇದ್ದ ಮೇಲೂ ಉಡುಪಿಯ ಕೆಲವು ಹೆಣ್ಣುಮಕ್ಕಳು ಹಿಜಾಬ್ ಗಾಗಿ ಹಠ ಹಿಡಿಯುತ್ತಾರೆ.ಈ ದೇಶದ ಕಾನೂನನ್ನು ಗೌರವಿಸದೆ ಬೇರೆ ದೇಶದ ಮತಾಂಧ ಶಕ್ತಿಗಳೂ ಇಲ್ಲಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತಾಗಿದೆ.ಒಟ್ಟಾರೆ ಭಾರತವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಸಚಿವೆ ಶೋಭಾ ವಾಗ್ದಾಳಿ ಮಾಡಿದ್ದಾರೆ.

Edited By : Shivu K
PublicNext

PublicNext

23/04/2022 01:05 pm

Cinque Terre

17.77 K

Cinque Terre

1

ಸಂಬಂಧಿತ ಸುದ್ದಿ