ಉಡುಪಿ: ಮಾಜಿ ಶಾಸಕ , ಕಾಂಗ್ರೆಸ್ ಮುಖಂಡ ಯು.ಆರ್.ಸಭಾಪತಿ 3 ಲಕ್ಷ ರೂ. ಪಡೆದು 15 ದಿನದಲ್ಲಿ ವಾಪಸ್ ಕೊಡುತ್ತೇನೆ ಎಂದು ಹೇಳಿ ಒಂದೂವರೆ ವರ್ಷ ಆದರೂ ಹಿಂದಿರುಗಿಸಿಲ್ಲ, ಅವರು ನನಗೆ ನೀಡಿದ್ದ ಚೆಕ್ ಕೂಡ ಬೌನ್ಸ್ ಆಗಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಮಂಡ್ಯ ಜಿಲ್ಲೆಯ ಮೀನುಗಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಿಕ್ಕ ಮಂಚಯ್ಯ ಎಂಬವರು ದೂರಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿಕ್ಕ ಮಂಚಯ್ಯ, ಮೀನುಗಾರ ಕಾಂಗ್ರೆಸ್ ರಾಜ್ಯಾಧ್ಯಕ್ಷ ಲಿಂಗರಾಜು ಮೂಲಕ ನನಗೆ ಸಭಾಪತಿಯವರ ಪರಿಚಯವಾಯಿತು. ನಮ್ಮ ಬೆಂಗಳೂರಿನ ಮನೆಗೆ 2019 ಫೆಬ್ರವರಿಯಲ್ಲಿ ಬಂದ ಸಭಾಪತಿ, "ಸಮಸ್ಯೆಯಲ್ಲಿ ಸಿಲುಕಿದ್ದೇನೆ. ಅರ್ಜೆಂಟಾಗಿ ಮೂರು ಲಕ್ಷ ರೂ.ಬೇಕು" ಎಂದು ಹೇಳಿ ಹಣ ಪಡೆದುಕೊಂಡು ಹೋಗಿದ್ದಾಗಿ ಚಿಕ್ಕ ಮಂಚಯ್ಯ ಹೇಳಿದ್ದಾರೆ.
ಬಳಿಕ ಸತಾಯಿಸಿ, ಐವತ್ತು ಸಾವಿರ ರೂ. ವಾಪಸ್ ನೀಡಿದ್ದು , ಉಳಿದ ಹಣ ಹಿಂದಿರುಗಿಸದೆ ಮೋಸ ಮಾಡಿದ್ದಾರೆ. ನನಗೆ ನ್ಯಾಯ ಬೇಕು. ಈ ಬಗ್ಗೆ ಅವರ ಮನೆಗೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪೊಲೀಸರಿಗೆ ವಿಷಯ ತಿಳಿಸಿದರೂ ನನಗೆ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
Kshetra Samachara
29/09/2020 01:20 pm