ಉಡುಪಿ: ಮೂರು ದಶಕಗಳಿಂದ ಉಗ್ರ ಹಿಂದುತ್ವವನ್ನು ಪ್ರತಿಪಾದಿಸುತ್ತಾ ಬಂದಿರುವ ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಲ್ತಾರಾ?2023 ರಲ್ಲಿ ನಡೆಯುವ ಚುನಾವಣೆಯಲ್ಲಿ ಮುತಾಲಿಕ್ ಉಡುಪಿ ಅಥವಾ ಕಾರ್ಕಳದಲ್ಲಿ ಕಂಟೆಸ್ಟ್ ಮಾಡ್ತಾರಾ? ಕಳೆದ ಕೆಲ ದಿನಗಳ ಬೆಳವಣಿಗೆ ನೋಡಿದರೆ ,ಈ ಪ್ರಶ್ನೆಗಳಿಗೆ ಹೌದು ಎಂಬ ಉತ್ತರ ಸಿಗುತ್ತದೆ.
ನವರಾತ್ರಿಯಲ್ಲಿ ಮುತಾಲಿಕ್ ಬಹುತೇಕ ಉಡುಪಿ ಜಿಲ್ಲೆ ಪ್ರವಾಸದಲ್ಲಿದ್ದರು.ಪ್ರವಾಸದುದ್ದಕ್ಕೂ ಧಾರ್ಮಿಕವಾಗಿ ರಾಜಕೀಯವಾಗಿ ಯುವಕರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಉಡುಪಿ ಮತ್ತು ಕಾರ್ಕಳದಲ್ಲಿ ಹೆಚ್ಚು ಕಾಲಕಳೆದ ಮುತಾಲಿಕ್ ಹಿಂದೂ ಸಂಘಟನೆ ಕಾರ್ಯಕರ್ತರ ಜೊತೆ ಸಮಾಲೊಚನೆ ನಡೆಸಿದ್ದಾರೆ. ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಸಿಡಿದೆದ್ದಿದ್ದಾರೆ. ಸಂಘಪರಿವಾರದ ಪ್ರಯೋಗಶಾಲೆ ಕರಾವಳಿಯಲ್ಲಿ ಚುನಾವಣೆಗೆ ನಿಲ್ಲುವ ಬಗ್ಗೆ ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ.
ಉಡುಪಿ ಅಥವಾ ಕಾರ್ಕಳದಲ್ಲಿ ಪಕ್ಷೇತರವಾಗಿ ನಿಂತು ಬಿಜೆಪಿಗೆ ಹೊಡೆತ ಕೊಡುವುದು ಮುತಾಲಿಕ್ ಮಾಸ್ಟರ್ ಪ್ಲ್ಯಾನ್.ಇದಕ್ಕೆ ಪೂರಕವಾಗಿ ಶ್ರೀರಾಮ ಸೇನೆ ಕಾರ್ಯಕರ್ತರು ಮತ್ತು ಹಿಂದೂ ಸಂಘಟನೆ ಯುವಕರು ಮುತಾಲಿಕ್ ಬೆRRನ್ನಿಗೆ ನಿಂತಿದ್ದಾರೆ.ಬಿಜೆಪಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಸದಾ ಅಸಮಾಧಾನ ಹೊರಹಾಕುವ ಮುತಾಲಿಕ್ ಗೆ ಕಾರ್ಯಕರ್ತರು ಚುನಾವಣೆಗೆ ನಿಲ್ಲುವಂತೆ ಸಲಹೆ ಮಾಡಿದ್ದಾರೆ. ಪಕ್ಷೇತರವಾಗಿ ನಿಂತರೆ ಬಿಜೆಪಿಗೂ ಹೊಡೆತ ಕೊಟ್ಟಂತಾಗುತ್ತದೆ ಎಂಬುದು ಕಾರ್ಯಕರ್ತರ ಲೆಕ್ಕಾಚಾರ.
ಎರಡು ದಿನ ಕಾರ್ಕಳದಲ್ಲಿದ್ದರೂ ,ಅಲ್ಲೇ ಇದ್ದ ಸಚಿವ ಸುನಿಲ್ ಕುಮಾರ್ ಮುತಾಲಿಕ್ ರನ್ನು ಭೇಟಿ ಆಗಿಲ್ಲ. ಒಂದು ಕಾಲಕ್ಕೆ ಇದೇ ಫೈರ್ ಬ್ರಾಂಡ್ ಮುತಾಲಿಕ್ ,ಸಚಿವ ಸುನಿಲ್ ಕುಮಾರ್ ,ಸಿಟಿ ರವಿ ಮುಂತಾದವರಿಗೆ ಗುರುವಾಗಿದ್ದರು.ಇತ್ತೀಚೆಗೆ ಪ್ರವೀಣ್ ನೆಟ್ಟಾರ್ ಮನೆಗೆ ತೆರಳಲೂ ಬಿಜೆಪಿ ಸರಕಾರ ಅನುಮತಿ ನೀಡಿರಲಿಲ್ಲ.ಹಲವು ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧ ವಿಧಿಸಿದ್ದೂ ಮುತಾಲಿಕ್ ,ಬಿಜೆಪಿ ಅಭ್ಯರ್ಥಿ ವಿರುದ್ಧ ಪಕ್ಷೇತರನಾಗಿ ನಿಲ್ಲಲು ಪ್ರಮುಖ ಕಾರಣ.ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.
-ವಿಶೇಷ ವರದಿ: ರಹೀಂ ಉಜಿರೆ
PublicNext
06/10/2022 07:40 pm