ಉಡುಪಿ: ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಾರಂಭಗೊಂಡಿದ್ದು ಇವತ್ತು ಸಿಎಂ ಭಾಗಿಯಾದರು.ಇಲ್ಲಿಗೆ ಆಗಮಿಸಿದ ಸಿಎಂ ,ರಾಜ್ಯದ ಮೊದಲ ತಿರುಗುವ ಮರದ ಮುಚ್ಚಿಗೆ ಉದ್ಘಾಟಿಸಿದರು.
ಕಡಿಯಾಳಿ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ಈ ವಿಶಿಷ್ಟ ಕೆತ್ತನೆ ಇರುವ ಮುಚ್ಚಿಗೆ ಇದೆ. ದೇವಸ್ಥಾನಕ್ಜೆ ಆಗಮಿಸಿದ ಸಿಎಂಗೆ ಸಚಿವ ಗೋವಿಂದ ಕಾರಜೋಳ, ಅಶೋಕ್, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಮತ್ತಿತರರು ಸಾಥ್ ನೀಡಿದರು.ಬಳಿಕ ಕಡಿಯಾಳಿ ಮಹಿಷಮರ್ದಿನಿ ದೇವಿಯ ದರ್ಶನ ಮಾಡಿದ ಬೊಮ್ಮಾಯಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
PublicNext
01/06/2022 12:16 pm