ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವುದು ಹಿಂದೂ ಧರ್ಮಕ್ಕೆ ವಿರುದ್ಧವಾದದ್ದಾಗಿದೆ.
ಇಂಥ ಹೇಳಿಕೆಗಳನ್ನೆಲ್ಲಾ ಅವರು ಕೊಡಬಾರದು.ಸಿದ್ಧರಾಮಯ್ಯ ಹೆಸರಿನಲ್ಲೇ ರಾಮನ ಹೆಸರಿದೆ ಎಂದು ಕಿಷ್ಕಿಂದದ ಶ್ರೀಗೋವಿಂದ ಸರಸ್ವತಿ ಸ್ವಾಮೀಜಿ ವಾಗ್ದಾಳಿ ಮಾಡಿದ್ದಾರೆ.
ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ,ಹಿಂದೂ ಧರ್ಮ ಮತ್ತು ಹಿಂದೂ ದೇವರ ವಿರುದ್ಧ ಅವರು ಕೆಲಸ ಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯನವರ ವರ್ತನೆ ಸರಿಯಲ್ಲ.ತಲೆಯ ಮೇಲಿನ ಬಟ್ಟೆ ತೆಗೆಯಲು ಸನ್ಯಾಸಿಗಳೇನು ಕಾಲೇಜಿಗೆ ಹೋಗುತ್ತಿದ್ದೇವಾ?
ಹಿಜಾಬ್ ವಿಚಾರಕ್ಕೂ ಸನ್ಯಾಸಿಗಳ ವಿಚಾರಕ್ಕೂ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮಗೆ ಸ್ವಲ್ಪವೂ ಬುದ್ಧಿ, ಜ್ಞಾನ ಇಲ್ಲವೇ? ಹಿಂದೂ ಸನ್ಯಾಸಿಗಳು ಮಾತ್ರ ಅಲ್ಲ, ಹಿಂದೂ ಧರ್ಮೀಯರ ಬಗ್ಗೆ ಮಾತನಾಡುವ ಅಧಿಕಾರ ನಿಮಗಿಲ್ಲ.ಹಿಂದೂ ಎಂಬ ಪದ ಉಚ್ಛಾರ ಮಾಡಲಿಕ್ಕೂ ನಿಮಗೆ ಅಧಿಕಾರ ಇಲ್ಲ.ಇಂಥವರು ನಾಯಕರಾದರೆ ಅಧರ್ಮವಾಗಿ ಹೋಗುತ್ತದೆ ಎಂದು ಹೇಳಿದ್ದಾರೆ.
PublicNext
25/03/2022 06:02 pm