ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಜಾಬ್‌ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸಂಚಿದೆ: ಶಾಸಕ ರಘುಪತಿ ಭಟ್

ಉಡುಪಿ: ರಾಜ್ಯದಲ್ಲಿ ಹಿಜಾಬ್‌ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಸಂಚಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಯಬೇಕು ಎಂದು ಬಿಜೆಪಿ ಶಾಸಕ ಕೆ. ರಘುಪತಿ ಭಟ್‌ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಶಾಸಕರು ,ಆರು ಜನ ಮಕ್ಕಳು ಹಿಜಾಬ್‌ ಹಾಕಲು ಅವಕಾಶ ನೀಡುವಂತೆ ಲಿಖಿತವಾಗಿ ಬೇಡಿಕೆ ಸಲ್ಲಿಸಿದ್ದರು. ಅವರ ಮನವೊಲಿಸಲು ಮುಸ್ಲಿಂ ಮುಖಂಡರು ಪ್ರಯತ್ನ ನಡೆಸಿದ್ದರು. ಆದರೂ, ಆರು ಮಕ್ಕಳು ಹಾಗೂ ಅವರ ಕುಟುಂಬದವರು ಯಾರ ಮಾತನ್ನೂ ಕೇಳಿಲ್ಲ. ಸಿಎಫ್ಐನವರು ಉಡುಪಿಯಲ್ಲಿ ಯಶಸ್ವಿಯಾಗದಿದ್ದಾಗ ಕುಂದಾಪುರಕ್ಕೆ ಹೋಗಿ ಅಲ್ಲಿನ ಪ್ರಥಮ ದರ್ಜೆ ಕಾಲೇಜಿನ ಹೆಣ್ಣುಮಕ್ಕಳಿಗೆ ಹಿಜಾಬ್‌ ಹಾಕಿಕೊಂಡು ಬರಲು ಕುಮ್ಮಕ್ಕು ನೀಡಿದ್ದರು. ಅದನ್ನು ನೋಡಿದ ಹಿಂದೂ ಯುವಕರು ತಮಗೂ ಕೇಸರಿ ಶಾಲು ಹಾಕಿಕೊಳ್ಳಲು ಅವಕಾಶ ನೀಡಬೇಕೆಂದು ಕೋರಿದರು. ಕೊನೆಗೆ

ಅವರೇ ಶಾಲು ಹಾಕಿಕೊಂಡು ಕಾಲೇಜಿಗೆ ಬಂದರು. ಅನಂತರ ಅದು ಎಲ್ಲ ಕಡೆ ಹರಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯಿತು ಎಂದರು.

ಉಡುಪಿ ಜಿಲ್ಲೆಯಲ್ಲಿ ಯಾವಾಗಲೂ ಸೌಹಾರ್ದತೆ ಇದೆ. ಹಿಜಾಬ್‌ ವಿಚಾರದಲ್ಲಿಯೂ ಸ್ಥಳೀಯರು ಯಾರೂ ಗಲಾಟೆ ಮಾಡಿಲ್ಲ. ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ. ಈಗಲೂ ಉಡುಪಿಯಲ್ಲಿ ಹಿಂದೂ-ಮುಸ್ಲಿಮರು ಅನ್ಯೋನ್ಯವಾಗಿಯೇ ಇದ್ದೇವೆ. ಹಿಜಾಬ್‌ ವಿಚಾರದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರವಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ರಘುಪತಿ ಭಟ್‌ ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

24/03/2022 02:59 pm

Cinque Terre

14.74 K

Cinque Terre

4

ಸಂಬಂಧಿತ ಸುದ್ದಿ