ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಗಾಂಧಿಜೀಯನ್ನೆ ಬಿಟ್ಟಿಲ್ಲ ನಾವು ಇನ್ನೂ ನೀವು ಯಾವ ಲೆಕ್ಕ ನಮಗೆ,ಹಿಂದೂ ಸಭಾ ಮುಖಂಡನ ವಿವಾದಾತ್ಮಕ ಹೇಳಿಕೆ...!

ಮಂಗಳೂರು: ಧಾರ್ಮಿಕ ಕೇಂದ್ರಗಳ ತೆರವಿಗೆ ಅಖಿಲ ಭಾರತ ಹಿಂದೂ ಮಹಾಸಭಾ ‌ಮಂಗಳೂರಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮೈಸೂರಿನಲ್ಲಿ ದೇಗುಲವನ್ನು ಧ್ವಂಸ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅನೇಕ ಧಾರ್ಮಿಕ ಕೇಂದ್ರಗಳ ಲಿಸ್ಟ್ ರೆಡಿ ಮಾಡಲಾಗಿದೆ. ಆದರೆ ಇತಿಹಾಸದಲ್ಲಿ ಒಂದೇ ಒಂದು ಮಸೀದಿ, ಚರ್ಚ್ ಒಡೆದದ್ದನ್ನು ತೋರಿಸಲಿ. ಅದ್ಯಾಕೆ ದೇವಸ್ಥಾನಗಳೇ ಟಾರ್ಗೆಟ್ ಆಗುತ್ತಿದೆ. ನಾವೇನು ಸುಮ್ಮನೇ ಕೂತಿದ್ದೀವಿ ಎಂದು ಭಾವಿಸಿದ್ದೀರಾ..? ಎಂದು ಪ್ರಶ್ನಿಸಿದರು. ಏನೂ ಮಾಡಿದ್ರೂ ಆಗುತ್ತಾ ಅಂತಾ ಭಾವಿಸಿದ್ದೀರಾ..?

ನಾವು ಗಾಂಧೀಜೀಯನ್ನೆ ಬಿಟ್ಟಿಲ್ಲ ಸ್ವಾಮಿ ನೀವು ಯಾವ ಲೆಕ್ಕ ನಮಗೆ? ಹಿಂದೂಗಳ ಮೇಲಿನ ದಾಳಿಯನ್ನು ಖಂಡಿಸಿ ಗಾಂಧೀಜೀಯನ್ನೇ ಬಿಟ್ಟಿಲ್ಲ, ಇನ್ನೂ ನಿಮ್ಮ ವಿಚಾರದಲ್ಲಿ ಅಲೋಚನೆ ಮಾಡಲು ಸಾಧ್ಯವಿಲ್ವ ನಮಗೆ, ಬಹುಸಂಖ್ಯಾತ ಹಿಂದೂಗಳು ಇರುವ ಈ ದೇಶದಲ್ಲಿ ಯಾಕೆ ಹೀಗಾಗುತ್ತಿದೆ..? ಇನ್ನು ದೇಗುಲ ಧ್ವಂಸ ವಿರೋಧಿಸಿ ಬಿಜೆಪಿಯ ಸಹಪರಿವಾರಗಳಾದ ಹಿಂದೂ ಜಾಗರಣ ವೇದಿಕೆ, ಭಜರಂಗದಳ, ವಿಹಿಂಪ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿತು.ಸ್ವಾಮಿ, ರಾಜ್ಯದಲ್ಲಿ ಯಾರ ಸರ್ಕಾರ ಇದೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಿದ್ರೆ ಪರಿಸ್ಥಿತಿ ಏನಾಗ್ತಿತ್ತು..? ಎಂದು ಪ್ರಶ್ನಿಸಿದರು. ಅವತ್ತು ಯಾವುದೋ ಒಂದು ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಜಿಲ್ಲೆಗೆ ಬೆಂಕಿ ಇಡ್ತೇವೆ ಎಂಬ ಹೇಳಿಕೆ ನೀಡಿದ್ರು. ಇವತ್ತು ಕಾಂಗ್ರೆಸ್ ಆಡಳಿತದಲ್ಲಿ ಇದ್ದಿದ್ರೆ ಇವರು ಬೆಂಕಿ ಹಾಕ್ತಿದ್ರು ಅಂತಾ ಹೇಳಿದ್ರು...

Edited By : Shivu K
Kshetra Samachara

Kshetra Samachara

18/09/2021 02:35 pm

Cinque Terre

14.55 K

Cinque Terre

3

ಸಂಬಂಧಿತ ಸುದ್ದಿ