ಪಾಲಿಕೆಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಮೇಯರ್ ಗಳ ಒಂದು ವರ್ಷದ ಅಧಿಕಾರಾವಧಿ ಕಡಿಮೆಯಾಗಿದೆ. ಆದ್ದರಿಂದ ಈ ಅಧಿಕಾರದ ಅವಧಿಯ ವಿಸ್ತರಣೆಯ ಅಗತ್ಯವಿದೆ ಎಂದು ಮಂಗಳೂರು ಮನಪಾ ನಿರ್ಗಮಿತ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಲ್ ಇಂಡಿಯಾ ಕೌನ್ಸಿಲ್ ಆಫ್ ಮೇಯರ್ಸ್ ನಲ್ಲೂ ಈ ರೀತಿಯ ಚರ್ಚೆ ನಡೆದಿದೆ. ಬಿಬಿಎಂಪಿಯಲ್ಲಿ ಮೇಯರ್ ಅಧಿಕಾರವಧಿಯನ್ನು ಎರಡುವರೆ ವರ್ಷಕ್ಕೆ ವಿಸ್ತಾರಿಸಿ ಮುಂದಿನ ಚುನಾವಣೆ ಹೊತ್ತಿಗೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.
ಭಕ್ತವತ್ಸಲ ಸಮಿತಿಯು ಮೇಯರ್ ಅಧಿಕಾರಾವಧಿ ಎರಡು ವರ್ಷಕ್ಕೆ ವಿಸ್ತರಣೆ ಮಾಡಬೇಕೆಂಬ ಪ್ರಸ್ತಾವನೆ ನೀಡಿದೆ. ಆದರೆ ಅದು ಸರಕಾರದ ನಿರ್ಧಾರವಾಗಿದೆ. ಬಿಬಿಎಂಪಿ ಮೇಯರ್ ಅಧಿಕಾರಾವಧಿ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಇನ್ನುಳಿದ ಮನಪಾದಲ್ಲೂ ಅನುಷ್ಠಾನಕ್ಕೆ ಬರಬಹುದು ಎಂಬ ವಿಶ್ವಾಸವಿದೆ. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಮೇಯರ್ ಅಧಿಕಾರವಧಿ ಒಂದು ವರ್ಷವಿರುವುದು ಕರ್ನಾಟಕದಲ್ಲಿ ಮಾತ್ರ. ಹೆಚ್ಚಿನ ರಾಜ್ಯದಲ್ಲಿ ಮೇಯರ್ ಅಧಿಕಾರಾವಧಿ ಐದು ವರ್ಷಗಳು. ಈಗಾಗಲೇ ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ವಿಕೇಂದ್ರೀಕರಣ ಹಾಗೂ ಯೋಜನಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡುವ ಕಾರ್ಯ ಆಗುತ್ತಿದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.
Kshetra Samachara
08/09/2022 05:50 pm