ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಹಿಂದೂ ನಾಯಕರಿಗೆ ಪ್ರಾಮುಖ್ಯತೆ ಕೊಡುತ್ತಿಲ್ಲ; ರಾಜೇಶ್ ಪವಿತ್ರನ್

ರಾಜ್ಯ ಬಿಜೆಪಿ ಸರ್ಕಾರವು ಹಿಂದೂ ನಾಯಕರಿಗೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಬೆದರಿಕೆ ಕರೆಗಳು ಬರುತ್ತಿದೆ ಎಂದು ಭದ್ರತೆ ಕೇಳಿದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ‌ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಗಸ್ಟ್ 17ರಂದು ರಾತ್ರಿ 9ಗಂಟೆ ವೇಳೆಗೆ ಐವರು ಅಪರಿಚಿತರು ತನ್ನ ಮಾಜಿ ಕಾರು ಚಾಲಕನ ಮನೆಗೆ ಬಂದು ಸಿಸಿಬಿ ಪೊಲೀಸ್ ಎಂದು ಬಂದೂಕು ತೋರಿಸಿ ಬೆದರಿಸಿ ನನ್ನ ಬಗ್ಗೆ ವಿಚಾರಿಸಿದ್ದಾರೆ. ನಾವು ಹಿಂದೂ ಕಾರ್ಯಕರ್ತರು ಭಯೋತ್ಪಾದಕರಲ್ಲ. ನಮ್ಮದು ತೆರೆದ ಪುಸ್ತಕ, ಹಾಗೇನಾದರೂ ಇದ್ದಲ್ಲಿ ನಮ್ಮಲ್ಲಿಗೆ ಬಂದು ವಿಚಾರಿಸಬಹುದಿತ್ತು.‌ ನಾನು ಈ ಹಿಂದೆಯೇ ಗೃಹ ಇಲಾಖೆಗೆ ಭದ್ರತೆ ಕೇಳಿದ್ದೆ. ಆದರೆ ರಾಜ್ಯ ಸರ್ಕಾರದಿಂದ ಭದ್ರತೆ ಸಿಗುವ ಅನುಮಾನವಿದೆ ಎಂದು ಹೇಳಿದರು.

ಹಿಂದುತ್ವದ ವಿಚಾರದಲ್ಲಿ ಯಾರಾದರೂ ಮಾತನಾಡಿದ್ದಲ್ಲಿ ಈ ರೀತಿಯ ಬೆದರಿಕೆಗಳು ಬರುತ್ತದೆ‌. ಅಖಿಲ ಭಾರತ ಹಿಂದೂ ಮಹಾಸಭಾದ ಆಂತರಿಕ ಮಾಹಿತಿಯ ಪ್ರಕಾರ ಬಂದವರು ಹಿಂದೂಗಳೇ ಆಗಿದ್ದಾರೆ. ನಾವು ಬಿಜೆಪಿ ವಿರೋಧಿಗಳಲ್ಲ. ರಾಜ್ಯದ ಬಿಜೆಪಿ ಸರ್ಕಾರದ ತಪ್ಪು ದಾರಿಗಳಿದು ಹಿಂದುತ್ವ ವಿರೋಧಿ ನೀತಿ ಅನುಸರಿಸಿದಾಗ ತಿದ್ದುವಂತಹ ಕಾರ್ಯ ಮಾಡಿದ್ದೇವೆ. ಹಿಂದೂ ಕಾರ್ಯಕರ್ತರಿಗೆ ಈ ಹಿಂದೆಯೂ ಬೆದರಿಕೆ ಕರೆ ಬಂದಿತ್ತು. ಎಲ್ಲವೂ ಆದ ಮೇಲೆ ಶಾಂತಿಯ ಮಾತುಕತೆ ಮಾಡುವುದು ಬೇಡ. ಹಿಂದೂ ನಾಯಕರಿಗೆ ಭದ್ರತೆ ಒದಗಿಸುವ ಕಾರ್ಯ ಮಾಡಿ. ಆಗದಿದ್ದಲ್ಲಿ ಇಂತಹ ಕೃತ್ಯಗಳನ್ನು ಎಸಗುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಆಗ್ರಹಿಸಿದರು.

Edited By :
Kshetra Samachara

Kshetra Samachara

22/08/2022 02:52 pm

Cinque Terre

9.41 K

Cinque Terre

2

ಸಂಬಂಧಿತ ಸುದ್ದಿ