ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ: ಶಾಂತಿ ಸುವ್ಯವಸ್ಥೆಗೆ ಎಎಪಿ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಸಂಘ ಸಂಸ್ಥೆಗಳನ್ನು ಕರೆದು ಶಾಂತಿ ಸಭೆಗಳನ್ನು ನಡೆಸುವಂತೆ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ. ಈ‌ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರು, ಡಿಸಿ, ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಆಪ್ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಕಳೆದೆರಡು ವಾರಗಳಿಂದ ಜಿಲ್ಲೆಯು ಪ್ರಕ್ಷುಬ್ಧ ವಾತಾವರಣವನ್ನು ಅನುಭವಿಸುತ್ತಿದೆ.

ಬೆಳ್ಳಾರೆಯಲ್ಲಿ ಇಬ್ಬರು ಹಾಗೂ ಸುರತ್ಕಲ್ ನಲ್ಲಿ ಒಬ್ಬರು ಹೀಗೆ ಜಿಲ್ಲೆಯಲ್ಲಿ 3 ಅಮಾಯಕರ ಹತ್ಯೆಯಾಗಿದೆ. ಇದಕ್ಕೆ ಕೋಮು ದ್ವೇಷವೇ ಕಾರಣ ಎಂಬ ಭಾವನೆ ಹುಟ್ಟಿದ್ದು, ಇಡೀ ಜಿಲ್ಲೆಯ ಜನತೆ ಭಯಭೀತರಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಜಿಲ್ಲಾಡಳಿತವು ಸೆಕ್ಷನ್ 144 ಜಾರಿಗೊಳಿಸಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಮುಂದೆ ಬಂದು ಪಕ್ಷಗಳ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ವ್ಯಾಪಾರೋದ್ಯಮಗಳ ಸಂಘಗಳ ಮುಖಂಡರು, ಸೇವಾ ಸಂಸ್ಥೆಗಳು, ಸಾಂಸ್ಕೃತಿಕ ಸಾಂಸ್ಕೃತಿಕ ಜಗತ್ತಿನ ಪ್ರತಿನಿಧಿಗಳು, ವಿದ್ಯಾ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿ ನಾಯಕರು ಹಾಗೂ ಇತರರನ್ನು ಕರೆದು ಶಾಂತಿ ಸಭೆ ನಡೆಸಿ ಜನತೆಗೆ ಸಾಂತ್ವನ ಹೇಳುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿನ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡಾ ಶಾಂತಿ ಸಮಿತಿಗಳನ್ನು ರಚಿಸಿ ಶಾಂತಿ ಸಭೆಗಳನ್ನು ನಡೆಸಿ ಸಾಮಾನ್ಯ ನಾಗರಿಕರಲ್ಲಿ ವಿಶ್ವಾಸ ಹುಟ್ಟುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಆಮ್ ಆದ್ಮ ಪಾರ್ಟಿ ಸಂಪೂರ್ಣ ಸಹಕಾರ ನೀಡಲು ತಯಾರಿದೆ ಎಂದರು.

Edited By : Somashekar
Kshetra Samachara

Kshetra Samachara

03/08/2022 01:52 pm

Cinque Terre

11.72 K

Cinque Terre

2

ಸಂಬಂಧಿತ ಸುದ್ದಿ