ಬಿಜೆಪಿಯವರಿಗೆ ರಾಷ್ಟ್ರಪತಿ ಚುನಾವಣೆಗೆ ಮತಗಳು ಬೇಕು. ಹಾಗಾಗಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ದೂರಿದರು.
ಮಹಾರಾಷ್ಟ್ರದ ಬಳಿಕ ಗೋವಾದಲ್ಲೂ ಬಂಡಾಯದ ಗಾಳಿಯ ಮುನ್ಸೂಚನೆಯ ಬಗ್ಗೆ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಇಂತಹ ಕುದುರೆ ವ್ಯಾಪಾರ ಇದ್ದದ್ದೇ ಎಂದು ತಿಳಿಸಿದರು.
ನಾನು ಈ ಬಗ್ಗೆ ಮಾಧ್ಯಮದಲ್ಲಿ ನೋಡಿಯೇ ತಿಳಿದದ್ದು. ದಿನೇಶ್ ಗುಂಡೂರಾವ್ ಅವರಿಗೆ ಬೆಳಗ್ಗಿನಿಂದ ಫೋನ್ ಕರೆಗೆ ಯತ್ನಿಸುತ್ತಿದ್ದೆ. ಅವರು ಫೋನ್ ಕರೆಗೆ ಸಿಕ್ಕಿಲ್ಲ ಎಂದು ಐವನ್ ಡಿಸೋಜ ಹೇಳಿದರು.
Kshetra Samachara
11/07/2022 03:09 pm