ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಿಲ್ಲಾ ಬಿಜೆಪಿಯಿಂದ ಕರಾಳ ದಿನಾಚರಣೆ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

ಇಂದಿರಾಗಾಂಧಿ ಸರಕಾರ ಹೇರಿದ್ದ ತುರ್ತು ಪರಿಸ್ಥಿತಿಯ 45 ನೇ ವರ್ಷ ಸಂಪೂರ್ಣವಾದ ಹಿನ್ನೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಕರಾಳ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, "ಸಿದ್ದರಾಮಯ್ಯನವರು ಈಗ ದೇಶದಲ್ಲಿ ತುರ್ತುಪರಿಸ್ಥಿತಿ ವಾತಾವರಣ ಇದೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯನ ಇದನ್ನು ಹೇಳುವುದು ಸರಿಯಲ್ಲ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ಇದ್ದವರು. ಇವತ್ತು ಕಾಂಗ್ರೆಸ್ ಬಾಲ ಹಿಡಿದುಕೊಂಡು ಹೋಗುತ್ತಾ ಇದ್ದಾರೆ. ಕೇವಲ ತಮ್ಮ ರಾಜಕೀಯ ಅಧಿಕಾರವನ್ನು ಉಳಿಸಿಕೊಳ್ಳಲು ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಘೊಷಣೆ ಮಾಡಿದ್ದರು. ಇವತ್ತು ಕಾಂಗ್ರೆಸ್ ನವರಿಗೆ ಇಡಿ ನೋಟಿಸ್ ನೀಡಿದ ಕೂಡಲೇ ಧರಣಿ ಮಾಡುವ ಪರಿಸ್ಥಿತಿ ಬಂದಿದೆ.

ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದು ಕಾಂಗ್ರೆಸ್. ಇದರಿಂದಾಗಿ ದೇಶದ ವಿರೋಧ ಪಕ್ಷದ ನಾಯಕರ ಬಂಧನ ಕೂಡಾ ಆಯಿತು ಎಂದರು. ಇದೇ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ವಿರುದ್ದ ಹೋರಾಡಿದ್ದ ಕಾರ್ಕಳದ ರಮಾಕಾಂತ ದೇವಾಡಿಗ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

Edited By :
Kshetra Samachara

Kshetra Samachara

25/06/2022 08:51 pm

Cinque Terre

6.11 K

Cinque Terre

0

ಸಂಬಂಧಿತ ಸುದ್ದಿ