ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಸ್ತುನಿಷ್ಠ ಪರಿಸರ ಸಂರಕ್ಷಣೆ ವರದಿ ಜಾರಿಯಾಗಲಿ: ರೈತರ ಆಗ್ರಹ

ಮಂಗಳೂರು: ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿದ್ದು, ಪರಿಸರ ಸಂರಕ್ಷಣೆ ವರದಿ ವಸ್ತುನಿಷ್ಠವಾಗಿ 1908 ಹಾಗೂ 1964ರ ಸೆಟ್ಲ್ ಮೆಂಟ್ ಕಾಯ್ದೆಯನ್ವಯ ಜಾರಿಯಾಗಲಿ. ಪರಿಸರ ಪ್ರದೇಶ ಮತ್ತು ಸಾಂಸ್ಕೃತಿಕ ಕಂದಾಯ ಗ್ರಾಮ ಹಾಗೂ ಭೂಮಿಗಳು ಮೊದಲು ವಿಭಜನೆಯಾಗಲಿ ಎಂದು ಮಲೆನಾಡು ಜಂಟಿ ಕ್ರಿಯಾ ಸಮಿತಿ ಮತ್ತು ರೈತ ಹಿತರಕ್ಷಣಾ ವೇದಿಕೆ ಕೊಲ್ಲಮೊಗ್ರು, ಸುಳ್ಯದ ಪ್ರದೀಪ್ ಕುಮಾರ್ ಕೆ.ಎಲ್ ತಿಳಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಮಾತನಾಡಿದ ಅವರು, ಕಸ್ತೂರಿ ರಂಗನ್ ವರದಿಯಲ್ಲಿ ಗಡಿ ಗುರುತು ವೈಮಾನಿಕ 10 ಕಿ.ಮೀ.ನಿಂದ 0-100 ಮೀಟರ್ ರೇಡಿಯಸ್‍ನಲ್ಲಿ ಇರಬೇಕು. 371ನೇ ವಿಧಿವಿಧಾನಗಳನ್ನು ಒಳಗೊಂಡ ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ವಲಯ ರಕ್ಷಣೆ ಮಾಡಬೇಕು. ಮಾನವನ ಹಾಗೂ ಪ್ರಾಣಿ ಸಂಕುಲದ ಬದುಕು ಹಕ್ಕುಗಳಿಗೆ ಚ್ಯುತಿ ಬರಬಾರದು. ಮಾನವ-ಮಾನವ ಸಂಘರ್ಷ, ಮಾನವ ವನ್ಯ ಜೀವಿ ಸಂಘರ್ಷ, ವೈಜ್ಞಾನಿಕ ಪರಿಸರಾತ್ಮಕ ಎಲ್‍ಎಲ್‍ಡಬ್ಲ್ಯೂವನ್ನು ಸರಕಾರ ನೇಮಿಸಬೇಕು ಎಂದು ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆಯಿಂದ ಪರಿಸರಕ್ಕೆ ಕಂಠಕವಾಗಿದೆ. ಎತ್ತಿನಹೊಳೆ ಯೋಜನೆ ಪರಿಸರ ಸಂರಕ್ಷಣೆಯನ್ನು 500 ವರ್ಷಗಳ ಹಿಂದೆ ಕೊಂಡೊಯ್ದಿದೆ‌. ಕಾಡಿನಂಚಿನಲ್ಲಿರುವ ಕಂದಾಯ ಗ್ರಾಮಗಳನ್ನು, ಸಾಂಸ್ಕøತಿಕ, ನೈಸರ್ಗಿಕ, ಸ್ವಾಯತ್ತತೆ ಹಾಗೂ ಗುಡ್ಡಕಾಡು ಜನಾಂಗಗಳ ರಕ್ಷಣೆ ಕಾಯ್ದೆಯನ್ನು ಕಸ್ತೂರಿ ರಂಗನ್ ವರದಿಯಲ್ಲಿ ಅಳವಡಿಡಬೇಕು. ಕಂದಾಯ ಗ್ರಾಮಗಳ ಮತ್ತು ಅರಣ್ಯದ ವೈಮಾನಿಕ ಸರಹದ್ದು 10 ಕಿ.ಮೀ. ನಿರ್ಬಂಧವನ್ನು ಸಡಿಲಿಸಬೇಕು. ಕೃಷಿಗೆ ಪೂರಕವಾದ ಕೀಟನಾಶಕ ಗೊಬ್ಬರವನ್ನು ಕಾಲ ಕ್ರಮೇಣ ನಿರ್ಬಂಧ ಸಡಿಲಿಕೆ ತರಬೇಕು. ಕೋವಿ ಪರವಾನಿಗೆ ನವೀಕರಣ ಆ ಪ್ರದೇಶದ ಮೂಲ ನಿವಾಸಿಗಳಿಗೆ ರಕ್ಷಣೆ ಹಕ್ಕು ಊರ್ಜಿತದಲ್ಲಿರಬೇಕು ಎಂದು ಪ್ರದೀಪ್ ಕುಮಾರ್ ಕೆ.ಎಲ್. ಹೇಳಿದರು.

Edited By :
Kshetra Samachara

Kshetra Samachara

22/07/2022 07:52 pm

Cinque Terre

16.32 K

Cinque Terre

0

ಸಂಬಂಧಿತ ಸುದ್ದಿ