ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅರಳ, ಕಾವಳಪಡೂರು, ಕಾಡಬೆಟ್ಟು, ಮೂಡನಡುಗೋಡು, ಕಾವಳಮೂಡೂರು,ಪಂಜಿಕಲ್ಲು ಗ್ರಾಮಗಳ ಮನೆಗಳಿಗೆ ಗುಡ್ಡ ಕುಸಿದು ಹಾನಿಗೊಂಡಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿ ಟಿಪ್ಪು ರಸ್ತೆ ಕುಸಿದು ಹಾನಿಗೊಂಡಿದೆ. ಈ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕರೆಯ ಮೂಲಕ ತಿಳಿಸಿದರು.
ಬಂಟ್ವಾಳ ತಾಲೂಕಿನ ಇವತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡುಪಡು ಕೋಡಿ ಗ್ರಾಮದ ನೆರಳಕಟ್ಟೆ ಎಂಬಲ್ಲಿ ವಾಸ್ತವವಿರುವ ಜಯಲಕ್ಷ್ಮಿ ಆಚಾರ್ಯ ಇವರ ಮನೆ ಪ್ರಕೃತಿ ವಿಕೋಪದಿಂದ ಈಗಲೂ ಆಗಲು ಬೀಳುವ ಸ್ಥಿತಿಯಲಿದೆ,ಮನೆಯ ಕುಟುಂಬದ ಜನರು ಚಿಂತಾ ಜನಕ ಸ್ಥಿತಿಯಾಗಿದೆ. ಸುಮಾರು 5-6 ವರ್ಷಗಳಿಂದ ಅನಾರೋಗ್ಯದಿಂದ ಇರುವ ಮನೆಯ ಯಜಮಾನ ಇವರ ನಿವಾಸಕ್ಕೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಯ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬಡ ಕುಟುಂಬಕ್ಕೆ ಧೈರ್ಯ ತುಂಬಿದರು.
Kshetra Samachara
11/07/2022 10:31 pm