ಉಡುಪಿ: ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರಕೃತಿಯನ್ನು ರಕ್ಷಿಸುವ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಉದ್ದೇಶದಿಂದ “ಪ್ರಕೃತಿ ವಂದನಾ ದಿವಸ್" ಪ್ರಯುಕ್ತ ಶಾಸಕ ಕೆ. ರಘುಪತಿ ಭಟ್ ಅವರು ಮರಕ್ಕೆ ರಕ್ಷೆ ಕಟ್ಟುವ ಮೂಲಕ ಪ್ರಕೃತಿ ವಂದನಾ ದಿವಸ್ ಆಚರಿಸಿ ಪ್ರಕೃತಿಯನ್ನು ರಕ್ಷಿಸುವ ಸಂದೇಶ ಸಾರಿದರು.
ಈ ಸಂದರ್ಭದಲ್ಲಿ ಶಾಸಕರ ಧರ್ಮಪತ್ನಿ ಶಿಲ್ಪಾ ಆರ್ ಭಟ್, ಮಗ ರೆಮ್ಯಾನ್, ಸಹೋದರ ರಮೇಶ್ ಬಾರಿಕ್ತಾಯ, ಸ್ಥಳೀಯರಾದ ಹರೀಶ್ ಕರಂಬಳ್ಳಿ, ಕೃಷ್ಣ ಶ್ರೀಧರನ್, ವಿಷ್ಣು ಪ್ರಸಾದ್, ಮಂಜುಳಾ ಪ್ರಸಾದ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
29/08/2022 09:33 pm