ಮಂಗಳೂರು: ಕವಿ, ಸಾಹಿತಿ, ಚಿಂತಕ ಡಾ.ವಸಂತ ಕುಮಾರ್ ಪೆರ್ಲ ಅವರ "ಅಮೃತ ಹಂಚುವ ಕೆಲಸ ಚಿಂತನ ಮತ್ತು ಸಂಸ್ಕತಿ" ಸಂಕಥನಗಳನ್ನೊಳಗೊಂಡ ನೂತನ ಕೃತಿ ಬಿಡುಗಡೆ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಡಾ. ವಸಂತ ಕುಮಾರ್ ಪೆರ್ಲ ಅವರ ಕೃತಿಯು ಚಿಂತಕ ಮತ್ತು ಸಮುದಾಯದ ಬಗೆಗಿನ ಸಂಸ್ಕತಿ ಸಂಕಥನವಾಗಿದ್ದು ನೂರು ವಿಶಿಷ್ಟ ಲೇಖನಗಳನ್ನು ಒಳಗೊಂಡ ಅಪರೂಪದ ಕೃತಿಯಾಗಿದೆ.
ಇಂದಿನ ತಲೆಮಾರಿನವರಲ್ಲಿ ಮರೆಯಾಗುತ್ತಿರುವ ಭಾಷೆ, ಆಚರಣೆ ಮತ್ತು ಜೀವನಕ್ರಮಗಳ ಕುರಿತಾದ ಹಲವು ಹಳೆಯ ಸಂಗತಿಗಳನ್ನು ಪುಸ್ತಕದಲ್ಲಿ ನಿರೂಪಿಸಲಾಗಿದೆ. ಒಂದು ತಲೆಮಾರಿನ ಬದುಕಿನ ವಿಶಿಷ್ಟ ಚಿತ್ರಣಗಳು ಇದರಲ್ಲಿದೆ ಎಂದರು.
ಈ ಸಂದರ್ಭ ಯಕ್ಷಗಾನ ಕಲಾವಿದ ಸೂರಿಕುಮೇರಿ ಗೋವಿಂದ ಭಟ್, ಕಲಾವಿದೆ ಆಯನಾ ಪೆರ್ಲ,ಶೈಲಾ ಕುಮಾರಿ ಉಪಸ್ಥಿತರಿದ್ದರು.
Kshetra Samachara
21/09/2020 10:15 pm