ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಿಜೆಪಿಗೆ ಸೋಲಿನ ಭಯ, ಆತಂಕ ಆರಂಭ: ಯು.ಟಿ. ಖಾದರ್

ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮೇಲಿನ ಸಿಬಿಐ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದು, ಬಿಜೆಪಿಗೆ ಸೋಲಿನ ಭಯ, ಆತಂಕ ಆರಂಭವಾಗಿದೆ. ಅದಕ್ಕಾಗಿ ರಾಜಕೀಯ ಪ್ರೇರಿತ ದಾಳಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಮಾತನಾಡಿದವರ ಮೇಲೆ ದಾಳಿಯಾಗುತ್ತಿದೆ. ಭ್ರಷ್ಟಾಚಾರದ ಪರ ಮಾತನಾಡಿದವರ ರಕ್ಷಣೆಯಾಗುತ್ತಿದೆ ಎಂದು ಹರಿಹಾಯ್ದ ಅವರು, ಉತ್ತರಪ್ರದೇಶದ ಪರಿಸ್ಥಿತಿ ಮರೆಮಾಚಲು ಸಿಬಿಐ ದಾಳಿಯಾಗಿದೆ. ಪ್ರಧಾನಮಂತ್ರಿ ಮೋದಿ ದೇಶವನ್ನು ಅಡವಿಟ್ಟಿದ್ದಾರೆ. ರಾಹುಲ್ ಗಾಂಧಿಯ ಶರ್ಟ್ ಕಾಲರ್ ಹಿಡಿದಿದ್ದಾರೆ. ಚುನಾವಣಾ ದೃಷ್ಟಿಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಯತ್ನ ಆಗಿದೆ ಎಂದು ಆರೋಪಿಸಿದರು.

Edited By : Nagesh Gaonkar
Kshetra Samachara

Kshetra Samachara

05/10/2020 05:31 pm

Cinque Terre

36.04 K

Cinque Terre

2

ಸಂಬಂಧಿತ ಸುದ್ದಿ