ಉಡುಪಿ: ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಲಾಡ್ಜ್ ಆವರಣಕ್ಕೆ ಮಾಜಿ ಸಚಿವ ವಿನಯಕುಮಾರ ಸೊರಕೆ ಆಗಮಿಸಿದ್ದಾರೆ. ಸಂತೋಷ್ ಕುಟುಂಬವನ್ನು ಭೇಟಿಯಾಗಲು ಬಂದ ಮಾಜಿ ಸಚಿವರನ್ನು ಒಳಪ್ರವೇಶಿಸಲು ಪೊಲೀಸರು ಬಿಡಲಿಲ್ಲ.
ಈ ವೇಳೆ ಮಾತನಾಡಿದ ಮಾಜಿ ಸಚಿವ ವಿನಯಕುಮಾರ ಸೊರಕೆ, ಸಹೋದರ ಸರ್ಕಲ್ ಇನ್ಸ್‌ಪೆಕ್ಟರ್ ಇದ್ದಾರೆ, ಅವರನ್ನು ಭೇಟಿಯಾದೆ. ಇತರ ಸಹೋದರರ ಜೊತೆಗೂ ಮಾತನಾಡಿದ್ದೇನೆ. ಸಂತೋಷ್ ಕುಟುಂಬ ಪೊಲೀಸರ ತನಿಖೆಗೆ ಎಲ್ಲಾ ಸಹಕಾರ ಕೊಟ್ಟಿದೆ. ಆದರೆ ಈವರೆಗೆ ಬಂಧನ ಮಾಡಿಲ್ಲ. ಎಲ್ಲಾ ಸಾಕ್ಷಿಗಳಿದ್ದರೂ ಬಂಧನ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಎಫ್‌ಐಆರ್‌ನಲ್ಲಿ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಇಲ್ಲ. ಅದನ್ನು ಉಲ್ಲೇಖಿಸಬೇಕು. ಸಾಕ್ಷಿ ಇರುವಾಗ ಬಂಧನ ಯಾಕೆ ತಡ? ಜನರಲ್ಲಿ ಪ್ರಕರಣದ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
PublicNext
13/04/2022 04:17 pm