ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೊಲೀಸ್ ಇಲಾಖೆಯಲ್ಲಿ‌‌ ತಾರತಮ್ಯ ಹೋಗಲಾಡಿಸಿ: ಹೋರಾಟಕ್ಕಿಳಿದ ಮಾಜಿ ಪೊಲೀಸ್!

ಉಡುಪಿ: ಸೇವಾ ನಿರತ ಹಾಗೂ ನಿವೃತ್ತ ಪೊಲೀಸರಿಗೆ ವೇತನ ತಾರತಮ್ಯ ಹಾಗೂ ಆರೋಗ್ಯ ಭಾಗ್ಯದ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸುವಂತೆ ನಿವೃತ್ತ ಪೊಲೀಸರೊಬ್ಬರು ಇಲಾಖೆ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ.

ಕರ್ನಾಟಕದಲ್ಲಿ ನೂರಾರು ಸಿಬ್ಬಂದಿಗಳನ್ನು ಮೇಲಾಧಿಕಾರಿಗಳ ಮನೆಯಲ್ಲಿ ಅಡುಗೆ ಹಾಗೂ ಇನ್ನಿತರ ಕಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರ ಬದಲಿಗೆ ಫಾಲೋವರ್ಸ್ Appoint ಮಾಡಿ ಸಮಸ್ಯೆ ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ.

ಕಳೆದ 5 ವರ್ಷಗಳಲ್ಲಿ ಪೊಲೀಸರ ಆತ್ಮಹತ್ಯೆ ಸಂಖ್ಯೆ 250 ದಾಟಿದೆ. ಇದಕ್ಕೆಲ್ಲ ಮೂಲ ಕಾರಣ ಇವರ ಆರ್ಥಿಕ ಸಮಸ್ಯೆ, ಮಾನಸಿಕ ಒತ್ತಡ, ವೇತನ, ಆರೋಗ್ಯ, ಸಿಬ್ಬಂದಿ ಕೊರತೆ ಹಾಗೂ ಆಡರ್ಲಿ ಪದ್ಧತಿ.ಇವನ್ನು ಸಂಪೂರ್ಣ ನಿರ್ನಾಮ ಮಾಡಿದರೆ, ಸಿಬ್ಬಂದಿ ಆತ್ಮಹತ್ಯೆ ಕಡಿಮೆಯಾಗಬಹುದು ಎಂದು ಮಾಜಿ ಪೊಲೀಸ್ ಸಂದೀಪ್ ಕುಮಾರ್ ಹೇಳಿದ್ದಾರೆ.

ಹೊಸದಾಗಿ ಆಯ್ಕೆಯಾಗಿರುವ ಸಿಬ್ಬಂದಿಗೆ ವೇತನ ತಾರತಮ್ಯಯವನ್ನು ಹೋಗಲಾಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

05/04/2022 07:30 pm

Cinque Terre

11.87 K

Cinque Terre

0

ಸಂಬಂಧಿತ ಸುದ್ದಿ