ಬಂಟ್ವಾಳ:ಮಹಾತ್ಮಾಗಾಂಧೀಜಿ ಅವರನ್ನು ಹತ್ಯೆ ಮಾಡಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡು ಹೇಳಿಕೆ ನೀಡಿರುವ ಕುರಿತು ಧರ್ಮೇಂದ್ರ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ. ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದೆ.
ಈ ಕುರಿತು ಪಕ್ಷದ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಹುಲ್ ಹಮೀದ್ ದೂರು ನೀಡಿದ್ದಾರೆ. ಎಸ್.ಡಿ.ಪಿ.ಐ. ಪಕ್ಷದ ನಿಯೋಗ ಬಂಟ್ವಾಳ ಪೊಲೀಸ್ ಠಾಣಾಧಿಕಾರಿ ಅವಿನಾಶ್ ಅವರಿಗೆ ದೂರು ಸಲ್ಲಿಸಿತು. ಈ ಸಂದರ್ಭ ಪಕ್ಷದ ಪುರಸಭಾ ಸದಸ್ಯರಾದ ಮುನೀಶ್ ಆಲಿ, ಇದ್ರೀಸ್, ಪಕ್ಷದ ನಾಯಕರು ಉಪಸ್ಥಿತರಿದ್ದರು.
Kshetra Samachara
21/09/2021 05:58 pm