ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಾವರ್ಕರ್ ಕಟೌಟ್‌ಗೆ ಯುವ ಮೋರ್ಚಾದಿಂದ ಪುಷ್ಪಾರ್ಚನೆ; ಕಾಂಗ್ರೆಸ್ ಭವನಕ್ಕೆ ಮುತ್ತಿಗೆಗೆ ಯತ್ನ

ಉಡುಪಿ: ನಗರದ ಬ್ರಹ್ಮಗಿರಿ ಸರ್ಕಲ್‌ನಲ್ಲಿರುವ ಸಾವರ್ಕರ್ ಭಾವಚಿತ್ರವಿರುವ ಫ್ಲೆಕ್ಸ್‌ ಇದೀಗ ವಿವಾದದ ಕೇಂದ್ರಬಿಂದುವಾಗಿ ಮಾರ್ಪಾಡಾಗಿದೆ. ಇವತ್ತು ಭಾವಚಿತ್ರಕ್ಕೆ ಹಿಂದೂಪರ ಸಂಘಟನೆಗಳು ಮಾಲಾರ್ಪಣೆ ಮಾಡಿದ ಬೆನ್ನಲ್ಲೇ ಬಿಜೆಪಿ ರಂಗಪ್ರವೇಶ ಮಾಡಿದೆ.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿ, ಸಾವರ್ಕರ್‌ಗೆ ಜೈಕಾರ ಹಾಕಿದ್ದಾರೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದರು. ಮಾಲಾರ್ಪಣೆ ಮಾಡಿದ ಯುವ ಮೋರ್ಚಾ ಕಾರ್ಯಕರ್ತರು ಅಲ್ಲೇ ಇದ್ದ ಕಾಂಗ್ರೆಸ್ ಭವನಕ್ಕೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ತಡೆದು ವಾಪಾಸು ಕಳಿಸಿದ ಪ್ರಸಂಗ ನಡೆಯಿತು.

ಇಷ್ಟೆಲ್ಲ ವಿವಾದಗಳಿಗೆ ಕಾರಣವಾಗಿದ್ದು, ಕಟೌಟ್‌ಗೆ SDPI ಮತ್ತು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದೆ. ಎರಡು ದಿನಗಳ ಹಿಂದೆ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಲು ಪ್ರಮೋದ್ ಉಚ್ಚಿಲ್ ಮತ್ತಿತರರು ಈ ಫ್ಲೆಕ್ಸ್‌ ಅಳವಡಿಸಿದ್ದರು. ತಕ್ಷಣ ಇದಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಯಾವಾಗ SDPI ಮತ್ತು ಕಾಂಗ್ರೆಸ್ ಇದನ್ನು ವಿರೋಧಿಸಿತೋ ಆಗ ಸಂಘ ಪರಿವಾರ ಮತ್ತು ಬಿಜೆಪಿ ರಂಗಪ್ರವೇಶ ಮಾಡಿದೆ. ಈ ಫ್ಲೆಕ್ಸ್‌ ವಿವಾದ ಯಾವ ಹಂತಕ್ಕೆ ತಲುಪುತ್ತೋ ಕಾದು ನೋಡಬೇಕು. ಸದ್ಯ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

Edited By :
PublicNext

PublicNext

17/08/2022 03:25 pm

Cinque Terre

24.67 K

Cinque Terre

3

ಸಂಬಂಧಿತ ಸುದ್ದಿ