ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೂಡುಶೆಡ್ಡೆ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ನಲ್ಲಿ ಮೊಳಗಿದ ಕೊರಗಜ್ಜನ ಭಕ್ತಿ ಗೀತೆ

ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮದ ಶಿವಾಜಿ ಪ್ರತಿಮೆ ಬಳಿಯ ಅಯ್ಯಪ್ಪ ಭಕ್ತ ವೃಂದದ ತಾತ್ಕಾಲಿಕ ಶೆಡ್ ಮುಂಭಾಗದಲ್ಲಿ ಮೈಕ್ ಅಳವಡಿಸಿ ಬೆಳಗ್ಗೆ 5 ಗಂಟೆಯಿಂದ 6 ಗಂಟೆಯ ವರೆಗೆ ಕೊರಗಜ್ಜನ ಭಕ್ತಿಗೀತೆಗಳನ್ನು ಹಾಕಿರುವ ಬಗ್ಗೆ ವರದಿಯಾಗಿದೆ.

ಇಂದು ರಾಜ್ಯದ್ಯಾಂತ ಅಝಾನ್ ವಿಚಾರದಲ್ಲಿ ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದೂ ಪರ ಸಂಘಟನೆಗಳು ಅಝಾನ್ ನಷ್ಟೆ ಜೋರಾಗಿ ಭಕ್ತಿಗೀತೆಗಳನ್ನು ಹಾಕಲಾಗುತ್ತದೆ ಎಂದು ಹೇಳಲಾಗಿತ್ತು.‌ ಮೂಡುಶೆಡ್ಡೆ ಮಸೀದಿಯಿಂದ ಸುಮಾರು 250 ಮೀ. ದೂರದಲ್ಲಿ ಈ ಶೆಡ್ ಇದೆ. ಈ ಸಂದರ್ಭ ಅಯ್ಯಪ್ಪ ಭಕ್ತ ವೃಂದದ ಬಳಿ ಇಬ್ಬರು ಶ್ರೀರಾಮ ಸೇನೆಯ ಕಾರ್ಯಕರ್ತರಿದ್ದರು. ಇದರ ನೇತೃತ್ವವನ್ನು ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ ವಹಿಸಿದ್ದಾರೆ.

ಅಝಾನ್ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಚಕ್ರವರ್ತಿ ಸೂಲಿಬೆಲೆ, ಅಝಾನ್ ಸದ್ದನ್ನು ನಿಯಂತ್ರಣ ಮಾಡಬೇಕೆಂಬುದು ಕೋರ್ಟ್ ಆದೇಶ. ಕೋರ್ಟ್ ಆದೇಶವನ್ನು ಪಾಲಿಸುವುದು ಸರ್ಕಾರದ ಜವಾಬ್ದಾರಿ. ಆದರೆ ದುರಾದೃಷ್ಟವಶಾತ್ ಸರ್ಕಾರ ಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂದರು ಸೂಲಿಬೆಲೆ.

ವಿರೋಧ ಪಕ್ಷಗಳು ಸರ್ಕಾರ ಕೋರ್ಟ್ ಆದೇಶ ಪಾಲಿಸಲು ಹಿಂದೆ ಬಿದ್ದಾಗ ಒತ್ತಾಯವನ್ನು ಮಾಡುತ್ತಿಲ್ಲ. ಸರ್ಕಾರ ಹಾಗೂ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಒಂದಾಗಿದೆ. ಎಲ್ಲಾ ಪಕ್ಷಗಳು ಮುಸ್ಲಿಮರ ಓಟು ಯಾರು ಜಾಸ್ತಿ ತೆಗೆದುಕೊಳ್ಳುತ್ತಾರೆ ಎಂಬ ಜಿದ್ದಿಗೆ ಬಿದ್ದಿದೆ. ಯುಪಿಯಲ್ಲಿ ಎಲ್ಲಾ ಧರ್ಮಗಳ 50 ಸಾವಿರಕ್ಕೂ ಅಧಿಕ ಲೌಡ್ ಸ್ಪೀಕರ್ ಗಳನ್ನು ತೆಗೆಯಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಬಿಜೆಪಿ ನೂರು ಪ್ರತಿಶತ ಫೇಲ್ಯೂರ್ ಆಗಿದೆ ಅಂತಲೂ ದೂರಿದು ಚಕ್ರವರ್ತಿ ಸೂಲಿಬೆಲೆ.

Edited By :
Kshetra Samachara

Kshetra Samachara

09/05/2022 06:13 pm

Cinque Terre

10.96 K

Cinque Terre

4

ಸಂಬಂಧಿತ ಸುದ್ದಿ