ಕುಂದಾಪುರ: ಕುಂದಾಪುರ ಸರಕಾರಿ ಕಾಲೇಜಿನಲ್ಲಿ ಇವತ್ತುಹಿಜಾಬ್ ಧರಿಸಿ ಕಾಲೇಜಿಗೆ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು
ಕಾಲೇಜಿನ ಗೇಟ್ ಬಳಿ ತಡೆಯಲಾಗಿದ್ದು ,ಕಾಲೇಜಿನ ಒಳಗೆ ಪ್ರವೇಶ ನಿರಾಕರಿಸಲಾಗಿದೆ. ವಿದ್ಯಾರ್ಥಿನಿಯರನ್ನು ತಡೆದ ಪ್ರಾಂಶುಪಾಲರು
ಕ್ಲಾಸಿಗೆ ತೆರಳದಂತೆ ಸೂಚಿಸಿದ್ದಾರೆ.ಈ ವೇಳೆ ವಿದ್ಯಾರ್ಥಿನಿಯರು ಮತ್ತು ಪ್ರಾಂಶುಪಾಲರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಹಿಜಾಬ್ ಕಳಚಿ ಕ್ಲಾಸಿಗೆ ಬರುವಂತೆ ಪ್ರಿನ್ಸಿಪಾಲ್ ಸೂಚನೆ ನೀಡಿದ್ದಾರೆ.ಅದಕ್ಕೆ ಒಪ್ಪದ ವಿದ್ಯಾರ್ಥಿನಿಯರು
ಗೇಟ್ ಬಳಿ ಪ್ರಾಂಶುಪಾಲರ ಜೊತೆ ,ಈತನಕ ಅವಕಾಶ ಇತ್ತು,ಇವತ್ತು ಏಕೆ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಸರಕಾರದ ಆದೇಶದಲ್ಲಿ ಕುಂದಾಪುರ ಕಾಲೇಜಿನ ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿನಿಯರು ವಾದ ಮಾಡಿದ್ದಾರೆ.ಸರಕಾರ ಇಡೀ ರಾಜ್ಯಕ್ಕೆ ಸುತ್ತೋಲೆ ಹೊರಡಿಸಿದೆ ಎಂದು ಪ್ರಾಂಶುಪಾಲರು ಉತ್ತರ ಕೊಟ್ಟರೂ ವಿದ್ಯಾರ್ಥಿನಿಯರು ಕೇಳಲಿಲ್ಲ.
ನಿನ್ನೆ ಇದೇ ಕಾಲೇಜಿನ ಹಲವು ವಿದ್ಯಾರ್ಥಿಗಳು ಕೇಸರಿ ಶಾಲು ಕೊಟ್ಟು ಕಾಲೇಜಿಗೆ ಬಂದಿದ್ದರು.ಬಳಿಕ ಸಭೆ ನಡೆದು ಇಂದಿನಿಂದ ಎಲ್ಲರೂ ಸಮವಸ್ತ್ರದಲ್ಲೇ ಬರುವಂತೆ ಸೂಚನೆ ನೀಡಲಾಗಿತ್ತು.
Kshetra Samachara
03/02/2022 11:43 am